ಬುಧವಾರ, ಜೂನ್ 16, 2021
22 °C
ಎಸ್ಸೆಸ್ಸೆಲ್ಸಿ: 31 ಪ್ರೌಢಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ

ಚಿಂತಾಮಣಿ: ಶೇ 94 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 94ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 3,584 ವಿದ್ಯಾರ್ಥಿಗಳಲ್ಲಿ 3,370 ಮಕ್ಕಳು ಉತ್ತೀರ್ಣರಾಗಿದ್ದಾರೆ. ಒಟ್ಟು 78 ಪ್ರೌಢಶಾಲೆಗಳಲ್ಲಿ 31 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿವೆ. ಅದರಲ್ಲಿ 7 ಸರ್ಕಾರಿ ಪ್ರೌಢಶಾಲೆಗಳು ಸೇರಿವೆ.

ನಗರದ ಕಿಶೋರ ವಿದ್ಯಾಭವನದ ಆರ್.ಅಮೂಲ್ಯಾ, ಆರ್.ವರ್ಷಿಣಿ ಹಾಗೂ ರಾಯಲ್ ಶಾಲೆಯ
ಎನ್.ವಿನುತಾ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಕಿಶೋರ ವಿದ್ಯಾಭವನದ ಪಿ.ಎಸ್.ಮಹಾಲಕ್ಷ್ಮಿ ಹಾಗೂ ರಾಯಲ್ ಪ್ರೌಢಶಾಲೆಯ ವೈ.ಎನ್.ವರ್ಷ 622 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಆರ್.ಕೆ.ಇಂಟರ್ ನ್ಯಾಷನಲ್ ವಿದ್ಯಾ ಸಂಸ್ಥೆಯ ಎನ್.ಬಿ.ಕೆ.ಕೀರ್ತಿ 621 ಅಂಕಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದಾರೆ.

ಸರ್ಕಾರಿ ಶಾಲೆಗಳ ಒಟ್ಟು 1,243 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, 1,117 ಮಂದಿ ತೇರ್ಗಡೆಯಾಗಿದ್ದಾರೆ (ಶೇ 89.8). ಅನುದಾನಿತ ಶಾಲೆಗಳ 495 ವಿದ್ಯಾರ್ಥಿಗಳಲ್ಲಿ 444 ಮಕ್ಕಳು ಪಾಸಾಗಿದ್ದಾರೆ (ಶೇ 89.7). ಅನುದಾನರಹಿತ ಶಾಲೆಗಳ 1709 ವಿದ್ಯಾರ್ಥಿಗಳಲ್ಲಿ 1676 ಉತ್ತೀರ್ಣರಾಗಿದ್ದಾರೆ (ಶೇ 98). ವಸತಿ ಶಾಲೆಗಳ 137 ವಿದ್ಯಾರ್ಥಿಗಳ ಪೈಕಿ 133 ಮಂದಿ ತೇರ್ಗಡೆಯಾಗಿದ್ದಾರೆ (ಶೇ 97).

ಶೇ 100ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು: ಸರ್ಕಾರಿ ಪ್ರೌಢಶಾಲೆ ಮುರುಗಮಲೆ, ಸರ್ಕಾರಿ ಪ್ರೌಢಶಾಲೆ ಹಿರೇಕಟ್ಟಿಗೇನಹಳ್ಳಿ, ಸರ್ಕಾರಿ ಪ್ರೌಢಶಾಲೆ ಮೈಲಾಂಡ್ಲಹಳ್ಳಿ, ಸರ್ಕಾರಿ ಪ್ರೌಢಶಾಲೆ ಬೂರಗಮಾಕಲಹಳ್ಳಿ, ಸರ್ಕಾರಿ ಪ್ರೌಢಶಾಲೆ ಕಾಗಯಿ, ಸರ್ಕಾರಿ ಪ್ರೌಢಶಾಲೆ ನಂದನಹೊಸಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ತಿರುಮಲಾಪುರ.

ಖಾಸಗಿ ಶಾಲೆಗಳು: ನಗರದ ಕಿಶೋರ ವಿದ್ಯಾಭವನ, ವಾಣಿ ಆಂಗ್ಲ ಮಾಧ್ಯಮ ಶಾಲೆ, ನ್ಯೂ ಪಬ್ಲಿಕ್ ಪ್ರೌಢಶಾಲೆ, ಕೆಂಪೇಗೌಡ ಆಂಗ್ಲ ಮಾಧ್ಯಮ ಶಾಲೆ, ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಚೇತನ್ ಆಂಗ್ಲ ಮಾಧ್ಯಮ ಶಾಲೆ, ದಿ.ಹೊರೈಜಾನ್ ಪ್ರೌಢಶಾಲೆ, ನವೀನ್ ವಿದ್ಯಾ ಕೇಂದ್ರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಎಂ.ಕೆ.ಬಿ. ಪಬ್ಲಿಕ್ ಶಾಲೆ, ವಿಜಯ ಆಂಗ್ಲ ಪ್ರೌಢಶಾಲೆ, ವಾಸವಿ ವಿದ್ಯಾನಿಕೇತನ ಪ್ರೌಢಶಾಲೆ, ವೆಂಕಟೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕರಿಯಪ್ಪಲ್ಲಿ ನವೋದಯ ಪ್ರೌಢಶಾಲೆ ಕಡದನಮರಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಕೈವಾರ, ಸತ್ಯಬಾಪೂಜಿ ಪ್ರೌಢಶಾಲೆ ಯಗವಕೋಟೆ, ಮಂಜುನಾಥ ಆಂಗ್ಲ ಮಾಧ್ಯಮ ಶಾಲೆ ಬಟ್ಲಹಳ್ಳಿ, ನವೋದಯ ಪ್ರೌಢಶಾಲೆ ಕುರುಬೂರು, ಸುಮಶ್ರೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುರುಟಹಳ್ಳಿ, ಸೂರ್ಯ ಆಂಗ್ಲ ಮಾಧ್ಯಮ ಶಾಲೆ ಬೂರಗಮಾಕಲಹಳ್ಳಿ, ಭಾರತ ರತ್ನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೃಷ್ಣರಾಜಪುರ, ಭೈರವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಾಲೆ ಕೈವಾರ, ಆದಿತ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಊಲವಾಡಿ, ಇ.ಇ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇರಗಂಪಲ್ಲಿ, ವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ನಾಯನಹಳ್ಳಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು