ತುಮಕೂರು: ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ವಿ.ವಿ ಸ್ನಾತಕೋತ್ತರ ಇಂಗ್ಲಿಷ್ ವಿಭಾಗ ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು.

21 ಕಾಲೇಜುಗಳಿಂದ 150 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸಂದೇಶಾತ್ಮಕ ಕಿರು ನಾಟಕ ಸ್ಪರ್ಧೆಯಲ್ಲಿ ಇಂಗ್ಲಿಷ್ ವಿಭಾಗ ಮೊದಲ ಸ್ಥಾನ ಪಡೆದರೆ, ಕೊರಟಗೆರೆ ಕಾಲೇಜು ಎರಡು ಮತ್ತು ವಿ.ವಿ ವಿಜ್ಞಾನ ಕಾಲೇಜು ವಿಭಾಗ ಮೂರನೇ ಸ್ಥಾನ ತಮ್ಮದಾಗಿಸಿಕೊಂಡವು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ದೇಶಭಕ್ತಿ ಗೀತೆ– ಇಂಗ್ಲಿಷ್ ವಿಭಾಗದ ಸಿದ್ಧರಾಮಪ್ಪ, ಸರ್ವೋದಯ ಕಾಲೇಜಿನ ಜಿ.ತನುಜಾ, ಕೊರಟಗೆರೆಯ ಆರ್.ಎಸ್.ರಕ್ಷಿತಾ. ಪ್ರಬಂಧ ರಚನೆ– ಕಲಾ ಕಾಲೇಜಿನ ರಂಗನಾಥ, ವಿ.ವಿ ಇತಿಹಾಸ ವಿಭಾಗದ ಎಂ.ಪಿ.ಸಂದೀಪ್, ಪತ್ರಿಕೋದ್ಯಮದ ಡಿ.ಎಸ್.ಪ್ರದೀಪ್. ಭಾಷಣ– ಕೊರಟಗೆರೆಯ ಎಚ್.ಈಶಶ್ರೀ, ಪತ್ರಿಕೋದ್ಯಮದ ಶರಣಪ್ಪ, ಕಲಾ ಕಾಲೇಜಿನ ಟಿ.ಶಶಿಕುಮಾರ್.

ರಸಪ್ರಶ್ನೆ ಸ್ಪರ್ಧೆ– ಕೆ.ಎಸ್.ಸಂಜಯ್ಕುಮಾರ್ ಮತ್ತು ಶಿವಪ್ಪ ಮಹಾಲಿಂಗಪೂರ. ಎಸ್.ಕೆ.ಹರೀಶ್ ಮತ್ತು ಈಶಪ್ಪ. ಎಚ್.ಈಶಶ್ರೀ ಹಾಗೂ ಎನ್.ಮಮತಾ.

ಅಂತರಾಳದ ಮಾತು ಆಲಿಸಿ

ನಮ್ಮ ಅಂತರಾಳದ ಮಾತು ಕೇಳಿಸಿಕೊಂಡಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಭಾರತೀಯ ವಿದ್ಯಾಭವನದ ಗಾಂಧಿ ಕೇಂದ್ರದ ನಿರ್ದೇಶಕಿ ಮೀನಾ ದೇಶಪಾಂಡೆ ಮಹಿಷಿ ಹೇಳಿದರು. ವಿಶ್ವವಿದ್ಯಾಲಯದಲ್ಲಿ ಬುಧವಾರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ‘ಗಾಂಧಿ ಭಾರತ’ ಕಾರ್ಯಕ್ರಮ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಸ್.ಶ್ರೀನಿವಾಸ ಗಾಂಧಿ ಭಾರತ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರೊ.ಟಿ.ಎನ್.ಹರಿಪ್ರಸಾದ್ ಸಂಚಾಲಕ ಕೆ.ಮಹಾಲಿಂಗ ಪ್ರೊ.ಕೆ.ವಿ.ಸಿಬಂತಿ ಪದ್ಮನಾಭ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.