ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಭಾವನೆಯೊಂದಿಗೆ ಚೆಲ್ಲಾಟ | ಸಾಧನೆ ಶೂನ್ಯ: ಬಿ.ಎನ್.ಚಂದ್ರಪ್ಪ ಆರೋಪ

ಬಿಜೆಪಿ ವಿರುದ್ಧ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಆರೋಪ
Published 13 ಏಪ್ರಿಲ್ 2024, 14:25 IST
Last Updated 13 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ಪಾವಗಡ: ದೇಶದ ಜನರ ಭಾವನೆಯೊಂದಿಗೆ ಚೆಲ್ಲಾಟ ಆಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಸಾಧನೆ ಶೂನ್ಯ. ಸುಳ್ಳು ಹೇಳುವುದೇ ಅವರ ಸಾಧನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಪದೇ ಪದೇ ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ. ಸಂವಿಧಾನ ಉಳಿಸಿಕೊಳ್ಳಲು, ರಾಷ್ಟ್ರದಲ್ಲಿ ಜಾತ್ಯತೀತ ತತ್ವ ಜೀವಂತವಾಗಿರಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.

ಪ್ರತಿ ತಿಂಗಳು ಬಡ ಜನರ ಮನೆಗೆ ಹಣ ಬರುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಜನತೆಯ ಬದುಕು ಹಸನಾಗಿದೆ. ಬಿಜೆಪಿಯವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ಸುಳ್ಳು ಹೇಳುವ ಬಗ್ಗೆ ಆರ್‌ಎಸ್‌ಎಸ್ ಬಿಜೆಪಿಗೆ ತರಬೇತಿ ನೀಡಿದೆ. ಇದೀಗ ಜೆಡಿಎಸ್ ಅವನತಿಯತ್ತ ಸಾಗಿದೆ. ಚುನಾವಣೆ ಮುಗಿದ ಕೂಡಲೇ ಬಿಜೆಪಿಯೊಂದಿಗೆ ವಿಲೀನವಾಗಲಿದೆ ಎಂದರು.

ಶಾಸಕ ಟಿ ಬಿ ಜಯಚಂದ್ರ, ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ. ಸಮೀಕ್ಷೆಗಳೂ ಸಹ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಾಗಿ ತಿಳಿಸಿವೆ. ಭದ್ರಾ ಮೇಲ್ದಂಡೆ ಕಾಮಗಾರಿ ಮುಗಿದು ನೀರು ಹರಿಯಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.

ಮಾಜಿ ಸಚಿವ ಎಚ್.ಆಂಜನೇಯ, ಅಶಕ್ತರು, ಬಡ ಜನತೆ, ರೈತರಿಗಾಗಿ ಬಿಜೆಪಿ ಒಂದೂ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ದೂರಿದರು.

ಮಾಜಿ ಶಾಸಕ ಸಾಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಸದಸ್ಯ ಪಿ.ಎಚ್. ರಾಜೇಶ್, ರವಿ, ಮಾಜಿ ಅಧ್ಯಕ್ಷ ಗುರಪ್ಪ, ಶಂಕರರೆಡ್ಡಿ, ಮುಖಂಡ ರಾಮಾಂಜಿನಪ್ಪ, ತಿಪ್ಪೇಸ್ವಾಮಿ , ವಕೀಲ ವೆಂಕಟರಾಮರೆಡ್ಡಿ, ಭಗವಂತಪ್ಪ, ಸಣ್ಣರಾಮರೆಡ್ಡಿ, ನರಸಿಂಹರೆಡ್ಡಿ, ಮುಗದಾಳಬೆಟ್ಟ ನರಸಿಂಹಯ್ಯ, ಶೇಷಾದ್ರಿ, ರಂಗೇಗೌಡ, ಸುಜಿತ್, ಸುಮಾ, ನಿಸಾರ್, ಪಾಪಣ್ಣ, ಮಂಜಣ್ಣ, ಮೈಲಪ್ಪ, ದಿವಾಕರಪ್ಪ ಉಪಸ್ಥಿತರಿದ್ದರು.

ಪಾವಗಡದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿದರು. ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಶಾಸಕ ಎಚ್ ವಿ ವೆಂಕಟೇಶ್ ಟಿ ಬಿ ಜಯಚಂದ್ರ ಮಾಜಿ ಸಚಿವ ಎಚ್ ಆಂಜನೇಯ ಇದ್ದರು
ಪಾವಗಡದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿದರು. ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಶಾಸಕ ಎಚ್ ವಿ ವೆಂಕಟೇಶ್ ಟಿ ಬಿ ಜಯಚಂದ್ರ ಮಾಜಿ ಸಚಿವ ಎಚ್ ಆಂಜನೇಯ ಇದ್ದರು

ಭಿನ್ನಾಬಿಪ್ರಾಯ ಇತ್ತು

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ‘ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರು ವಿಧಾನಸಭೆ ಚುನಾವಣೆ ವೇಳೆ ಪಾವಗಡ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ತಾಲ್ಲೂಕಿನ ಹತ್ತಾರು ಮಂದಿಯನ್ನು ಕರೆದೊಯ್ದು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬೇಸರ ಇತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನನ್ನು ಕರೆಸಿ ಚಂದ್ರಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಿ ಎಂದಿದ್ದರು’ ಎಂದು  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT