ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಚಿಕಿತ್ಸೆಗೆ ಕಾಂಗ್ರೆಸ್‌ ಆಗ್ರಹ

Last Updated 1 ಜೂನ್ 2021, 4:34 IST
ಅಕ್ಷರ ಗಾತ್ರ

ತುಮಕೂರು: ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಯೋಜನೆಯಡಿ ಬಡ, ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ಕೋವಿಡ್ ಚಿಕಿತ್ಸೆ ನೀಡುವಂತೆ ಕಾಂಗ್ರೆಸ್ ಮುಖಂಡರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರನ್ನು ಒತ್ತಾಯಿಸಿದರು.

ಸೋಮವಾರ ಭೇಟಿಯಾದ ನಿಯೋಗದ ಮುಖಂಡರು, ‘ಸಕಾಲಕ್ಕೆ ಕೋವಿಡ್ ಲಸಿಕೆ ನೀಡಬೇಕು. 3ನೇ ಅಲೆಯಲ್ಲಿ ಮಕ್ಕಳ ರಕ್ಷಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಆಮ್ಲಜನಕ ಕೊರತೆ ನೀಗಿಸಬೇಕು. ರೆಮ್‌ಡಿಸಿವಿರ್ ಲಸಿಕೆ, ಅಗತ್ಯ ಔಷಧಿ ಸಿಗುವಂತೆ ಮಾಡಬೇಕು. ಕಪ್ಪು ಶಿಲೀಂಧ್ರಕ್ಕೆ ತುತ್ತಾದವರಿಗೆ ಸೂಕ್ತ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಡಿಎಚ್‍ಒ ಡಾ.ನಾಗೇಂದ್ರಪ್ಪ, ‘ಖಾಸಗಿ ಆಸ್ಪತ್ರೆಗಳಲ್ಲಿ 1,250 ಆಮ್ಲಜನಕ ಸಹಿತ ಹಾಸಿಗೆಗಳು ಲಭ್ಯ ಇವೆ. ಅದರಲ್ಲಿ 650 ಹಾಸಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ನೀಡಿರುವ 87 ವೆಂಟಿಲೇಟರ್‌ಗಳಲ್ಲಿ 74 ಬಳಕೆಯಾಗುತ್ತಿವೆ’ ಎಂದು ವಿವರಿಸಿದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ, ಮುಖಂಡರಾದ ಕೆಂಚಮಾರಯ್ಯ, ಆರ್. ರಾಮಕೃಷ್ಣ, ಜಯರಾಮ್, ರೇವಣಸಿದ್ಧಯ್ಯ, ಎಚ್.ಸಿ. ಹನುಮಂತಯ್ಯ, ಚಂದ್ರಶೇಖರಗೌಡ, ಟಿ.ಎಸ್. ತರುಣೇಶ್, ನಿರಂಜನ್, ಮಂಜುನಾಥ್, ನಟರಾಜು, ಗೀತಾ, ಸಂಜೀವ್‍ಕುಮಾರ್, ರುದ್ರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT