ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಅಲ್ಲ, ಕಣ್ಣೀರಸ್ವಾಮಿ: ಸಿದ್ದರಾಮಯ್ಯ ಲೇವಡಿ

Last Updated 4 ಡಿಸೆಂಬರ್ 2021, 16:50 IST
ಅಕ್ಷರ ಗಾತ್ರ

ಕುಣಿಗಲ್ (ತುಮಕೂರು): ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದು ಮತ್ತು ಅಳುವುದರಲ್ಲಿ ನಿಸ್ಸೀಮ. ಜನರ ಅನುಕಂಪ ಗಿಟ್ಟಿಸಲು ಅಳುತ್ತಾರೆ’ ಎಂದುವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

‘ರಾಜಕಾರಣದಲ್ಲಿದ್ದ ಮೇಲೆ ಅಳುವುದು ಏಕೆ? ಜನಾಭಿಪ್ರಾಯವಿದ್ದರೆ ಅಧಿಕಾರದಲ್ಲಿರಬೇಕು. ಇಲ್ಲದಿದ್ದರೆ ಮನೆಯಲ್ಲಿ ಇರಬೇಕು. ಅದು ಬಿಟ್ಟು ಸಭೆಗಳಲ್ಲಿ ಕಣ್ಣೀರು ಹಾಕುವುದು ತರವಲ್ಲ’ ಎಂದು ಹೇಳಿದರು.

‘ಜೆಡಿಎಸ್ ದೇವೇಗೌಡರ ಕುಟುಂಬದ ಪಕ್ಷವಾಗಿದ್ದು, ಅವಕಾಶವಾದಿ ರಾಜಕಾರಣ ಮಾಡುತ್ತಿದೆ’ ಎಂದು ತಾಲ್ಲೂಕಿನ ಎಡೆಯೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಾಗ್ದಾಳಿ ನಡೆಸಿದರು.

ಕೋಮವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಲಾಗಿತ್ತು. ಆದರೆ ಶಾಸಕರು, ಸಚಿವರನ್ನುಕುಮಾರಸ್ವಾಮಿ ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ‘ಆಪರೇಷನ್ ಕಮಲ’ಕ್ಕೆ ಸರ್ಕಾರ ಬಲಿಯಾಯಿತು.‘ಸಿದ್ದರಾಮಯ್ಯ ಅವರಿಂದ ಸರ್ಕಾರ ಉರುಳಿತು’ ಎಂದು ಈಗ ಸುಳ್ಳು ಹೇಳುತ್ತಿದ್ದಾರೆ’ ಎಂದು ಆಪಾದಿಸಿದರು.

* ದೇಶದಲ್ಲಿ ಅಚ್ಛೇ ದಿನ್ ಬಂದಿರುವುದು ತೈಲ ಕಂಪನಿ ಮಾಲೀಕರಿಗೆ ಹೊರತು, ಜನ ಸಾಮಾನ್ಯರಿಗಲ್ಲ

–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT