ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ; ಕಲುಷಿತ ನೀರು ಪೂರೈಕೆ

Last Updated 7 ಸೆಪ್ಟೆಂಬರ್ 2020, 1:26 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದಲ್ಲಿನ 13ನೇ ವಾರ್ಡ್ ಮಹಾಲಲಕ್ಷ್ಮಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆ ಆಗುತ್ತಿದೆ.

ಈ ಹಿಂದೆ ಹೇರೂರು ಕೆರೆಯಿಂದ ಶುದ್ಧೀಕರಿಸದೆ ನೀರನ್ನೇ ನೇರವಾಗಿ ಪಟ್ಟಣದ ಮನೆಗಳಿಗೆ ಪೂರೈಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ನೀರು ಶುದ್ಧೀಕರಣ ಘಟಕ ಕೆಟ್ಟು ನಿಂತು ತಿಂಗಳುಗಳೇ ಕಳೆದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಬಾರಿ ಭೇಟಿ ನೀಡಿ ದುರಸ್ತಿಗೆ ಸೂಚಿಸಿದರೂ ದುರಸ್ತಿಯಾಗಿರಲಿಲ್ಲ.

ಈ ಸಂಬಂಧ ‘ಪ್ರಜಾವಾಣಿ’ಯು ಕಲುಷಿತ ನೀರನ್ನು ಪೂರೈಕೆ ಮಾಡುತ್ತಿರುವ ಬಗ್ಗೆ ‘ಗುಬ್ಬಿವಾಸಿಗಳಿಗಿಲ್ಲ ಶುದ್ಧ ಕುಡಿಯುವ ನೀರು’ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಕುಡಿಯುವ ನೀರಿನಫಿಲ್ಟರ್‌ ಬದಲಾವಣೆಗೆ
ಮುಂದಾದರು.

ಅಲ್ಲದೆ, ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಫಿಲ್ಟರ್ ಬದಲಾವಣೆಗೆ 14ನೇ ಹಣಕಾಸು ಯೋಜನೆಯಡಿ ಉಳಿಕೆಯಾದ ₹7.19 ಲಕ್ಷ ಬಳಸಿಕೊಳ್ಳಲು ಅನುಮೋದನೆ ದೊರೆತು, ಘಟಕವನ್ನು ದುರಸ್ತಿ ಮಾಡಲಾಯಿತು.

ಆದರೂ ಭಾನುವಾರ ಹಳದಿ ಮಿಶ್ರಿತ ಕಲುಷಿತ ನೀರು ಮಹಾಲಕ್ಷ್ಮಿನಗರದಲ್ಲಿ ಸರಬರಾಜು ಆಗಿದೆ. ಇದರಿಂದ ಬೇಸರಗೊಂಡ ನಾಗರಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT