ಭಾನುವಾರ, ಜನವರಿ 17, 2021
20 °C

ಮುಂದುವರೆದ ಏಕಾಂಗಿ ದಾಸೋಹ

ಟಿ.ಎಚ್. ಗುರುಚರಣ್ ಸಿಂಗ್ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಕೊರೊನಾ ಸಂಕಷ್ಟದ ಸಮಯದಲ್ಲಿ ನಿರ್ಗತಿಕರಿಗಾಗಿ ಪ್ರಾರಂಭವಾದ ದಾಸೋಹ ಕಾರ್ಯವನ್ನು ಏಕಾಂಗಿಯಾಗಿ ನಿರಂತರವಾಗಿ ಮುಂದುವರೆಸಿದ ಕೊರೊನಾ ವಾರಿಯರ್ ನಾರಾಯಣ್ ಜನರ ಗಮನ ಸೆಳೆದಿದ್ದಾರೆ.

ಪಟ್ಟಣದ ದೊಡ್ಡಪೇಟೆಯಲ್ಲಿ ವ್ಯಾಪಾರ ಮಾಡಿಕೊಂಡಿರುವ ನಾರಾಯಣ್ ಅವರು ಸಣ್ಣ ಪ್ರಮಾಣದಲ್ಲಿ ದಾಸೋಹ ಮಾಡುತ್ತಿದ್ದರು. ಕೊರೊನಾ ವೇಳೆ ಸ್ನೇಹಿತರ ಜತೆ ಸೇರಿ ನಿರ್ಗತಿಕರಿಗೆ ದಾಸೋಹ ಮಾಡಿದರು.

ಸುಮಾರು 60 ದಿನಗಳ ಲಾಕ್‌ಡೌನ್ ಸಮಯದಲ್ಲಿ ಕೊರೊನಾ ವಾರಿಯರ್ಸ್ ಜತೆ ಸೇರಿ ನಿತ್ಯ 150 ರಿಂದ 200 ನಿರ್ಗತಿಕರಿಗೆ ಮೂರು ಹೊತ್ತು ದಾಸೋಹ ಮಾಡುತ್ತಿದ್ದರು. ನಂತರ ಇದು ಸ್ಥಗಿತಗೊಂಡಿತ್ತು. 

ಲಾಕ್‌ಡೌನ್ ಮುಗಿದ ನಂತರವೂ ದಾಸೋಹ ಸೇವೆಯನ್ನು ಏಕಾಂಗಿಯಾಗಿ ಮುಂದುವರೆಸುವ ಉತ್ಸಾಹಕ್ಕೆ ಸ್ನೇಹಿತರು ದಾನಿಗಳು ನೆರವು ಮತ್ತು ಪ್ರೋತ್ಸಾಹ ದೊರೆತ ಕಾರಣ ನಾರಾಯಣ್ ದಾಸೋಹ ಸೇವೆಯನ್ನು ಮುಂದುವರೆಸಿದ್ದಾರೆ.

ನಿತ್ಯವೂ ಬೆಳಗ್ಗೆ 8 ಗಂಟೆಗೆ ತಿಂಡಿಯ ಪೊಟ್ಟಣಗಳನ್ನು ಸಿದ್ಧಪಡಿಸಿಕೊಂಡು ಪಟ್ಟಣವನ್ನು ಸುತ್ತಿ ನಿರ್ಗತಿಕರಿಗೆ ನೀಡುತ್ತಿದ್ದಾರೆ. ನಾರಾಯಣ್ ಅವರ ಸೇವೆಯನ್ನು ಕಂಡ ನಿರ್ಗತಿಕರು ಪುರಸಭೆ ಉದ್ಯಾನ, ಸಂತೆಮೈದಾನ ಮತ್ತು ಅಡವಿಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಾಯ್ದು ಕುಳಿತಿರುತ್ತಾರೆ. ನಾರಾಯಣ್ ಅವರ ಬೈಕ್ ಕಂಡ ಕ್ಷಣ ಸಂತಸದಿಂದ ಬಂದು ತಿಂಡಿ ಪೊಟ್ಟಣ ಪಡೆಯುತ್ತಾರೆ.

ಬೆಳಿಗ್ಗೆ ಚಳಿಯಲ್ಲಿ ನಿರ್ಗತಿಕರು ಕಾಯುತ್ತಿರುವುದನ್ನು ಕಂಡು ಮರುಗಿದ ನಾರಾಯಣ್ ಸ್ಥಳಿಯ ದಾನಿಗಳಿಂದ ವುಲ್ಲನ್ ಬೆಡ್‌ಶೀಟ್‌ಗಳನ್ನು ದಾನವಾಗಿ ಸಂಗ್ರಹಿಸಿ ನಿರ್ಗತಿಕರಿಗೆ
ವಿತರಿಸಿದ್ದಾರೆ.

ನಿತ್ಯ ತನ್ನ ಕಾಯಕ ಪ್ರಾರಂಭಿಸುವ ಮೊದಲು ನಿರ್ಗತಿಕರಿಗೆ ತಿಂಡಿಯ ಪೊಟ್ಟಣಗಳನ್ನು ವಿತರಿಸುವುದು ನಾರಾಯಣ್ ಅವರ ವಾಡಿಕೆ. ನಾರಾಯಣ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ನೇಹಿತರು, ವ್ಯಾಪಾರಿಗಳು ತಮ್ಮ ಪಾಲಿನ ದೇಣಿಗೆಯನ್ನು ನೀಡುತ್ತಿದ್ದಾರೆ. ಸ್ನೇಹಿತರು ಮತ್ತು ದಾನಿಗಳ ಪ್ರೋತ್ಸಾಹದಿಂದ ಪ್ರೇರಿತರಾಗಿರುವ ನಾರಾಯಣ್ ಮುಂದಿನ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ದಾಸೋಹಕ್ಕೆ ಸಜ್ಜಾಗುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು