ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಚ್ಚ ವೀಕ್ಷಕರು ಅಖಾಡಕ್ಕೆ

Published 4 ಏಪ್ರಿಲ್ 2024, 6:59 IST
Last Updated 4 ಏಪ್ರಿಲ್ 2024, 6:59 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚು, ವೆಚ್ಚದ ಮೇಲೆ ಕಣ್ಣಿಡಲು ಚುನಾವಣಾ ವೆಚ್ಚ ವೀಕ್ಷಕರು ಅಖಾಡಕ್ಕೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ವೀಕ್ಷಕರು ಅಭ್ಯರ್ಥಿಗಳ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದಾರೆ.

ಐಆರ್‌ಎಸ್‌ ಅಧಿಕಾರಿಗಳಾದ ಹರ್ವಿಂದರ್‌ ಪಾಲ್‌ಸಿಂಗ್‌, ಶೋಭಾ ಅವರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಸಾರ್ವಜನಿಕರು ಪ್ರತಿ ದಿನ ಬೆಳಗ್ಗೆ 9ರಿಂದ 11 ಗಂಟೆ ವರೆಗೆ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಬಹುದು ಅಥವಾ ಮೊ 70195 53171, 70195 36793 ಸಂಪರ್ಕಿಸಿ ದೂರು ಸಲ್ಲಿಸಬಹುದು.

ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಮಧುಗಿರಿ ವ್ಯಾಪ್ತಿಯ ಜನರು ಹರ್ವಿಂದರ್‌ ಪಾಲ್‌ಸಿಂಗ್‌, ತುಮಕೂರು ನಗರ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾರ್ವಜನಿಕರು ಶೋಭಾ ಅವರನ್ನು ಸಂಪರ್ಕಿಸಿ ದೂರು ಕೊಡಬಹುದು.

‘ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಪ್ರತಿ ದಿನ ಬ್ಯಾಂಕ್‌ ನಗದು ವಹಿವಾಟಿನ ಮೇಲೂ ನಿಗಾ ವಹಿಸಲಾಗುವುದು. ಆಮಿಷ ಒಡ್ಡುವುದನ್ನು ತಡೆಯಬೇಕಿದೆ. ಚೆಕ್‌ಪೋಸ್ಟ್‌, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ವೆಚ್ಚ ವೀಕ್ಷಕರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿ.ಪಂ ಸಿಇಒ ಜಿ.ಪ್ರಭು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT