ಮಂಗಳವಾರ, ಜೂನ್ 28, 2022
26 °C

ತುಮಕೂರು: ಕೋವಿಡ್‌ನಿಂದ 6 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಳೆದ ಒಂದೆರಡು ದಿನಗಳಿಂದ ಕಡಿಮೆಯಾಗಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಭಾನುವಾರ ತುಸು ಏರಿಕೆಯಾಗಿದ್ದು, 698 ಮಂದಿಗೆ ಸೋಂಕು ದೃಢಪಟ್ಟಿದೆ.

ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು ಶನಿವಾರ 4 ಜನರು ಮೃತಪಟ್ಟಿದ್ದರೆ, ಭಾನುವಾರ 6 ಮಂದಿ ಸಾವು ಕಂಡಿದ್ದಾರೆ. ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ 2, ತುರುವೇಕೆರೆ, ತಿಪಟೂರು, ಶಿರಾ, ಪಾವಗಡ ತಾಲ್ಲೂಕಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ತುಮಕೂರು 104, ಚಿಕ್ಕನಾಯಕನಹಳ್ಳಿ 66, ಗುಬ್ಬಿ 32, ಕೊರಟಗೆರೆ 41, ಕುಣಿಗಲ್ 35, ಮಧುಗಿರಿ 50 ಮಂದಿಗೆ ಸೋಂಕು ಖಚಿತಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು