ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಲ್ಲಿ ಹೆಚ್ಚುತ್ತಲಿದೆ ಕೊರೊನಾ

ಮಂಗಳವಾರ ಮತ್ತೆ 52 ಮಂದಿಗೆ ಸೋಂಕು; ಸಾವಿನ ಸಂಖ್ಯೆ 16ಕ್ಕೆ ಏರಿಕೆ
Last Updated 14 ಜುಲೈ 2020, 15:27 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮತ್ತು ತುಮಕೂರು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನವೂ ಹೆಚ್ಚುತ್ತಲೇ ಸಾಗಿದೆ. ಮಂಗಳವಾರ ಮತ್ತೆ 52 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 565ಕ್ಕೆ ಏರಿದೆ. ಸೋಂಕಿನಿಂದ ಬಳಲುತ್ತಿದ್ದ ಗುಬ್ಬಿ ತಾಲ್ಲೂಕಿನ ಹೆರೂರಿನ 45 ವರ್ಷದ ವ್ಯಕ್ತಿ ಮಂಗಳವಾರ ಮೃತಪಟ್ಟಿದ್ದು ಸಾವಿನ ಸಂಖ್ಯೆ 16ಕ್ಕೆ ತಲುಪಿದೆ.

ತುಮಕೂರು ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ನಗರದ ಒಂದು ಪ್ರದೇಶವನ್ನು ಇಂದು ಸೀಲ್‌ಡೌನ್ ಮಾಡಿದ್ದರೆ, ಮರು ದಿನ ಸಮೀಪ ಇಲ್ಲವೆ ಸುತ್ತಲಿನ ರಸ್ತೆಗಳು ಸೀಲ್‌ಡೌನ್ ಆಗಿರುತ್ತವೆ.

ಮಂಗಳವಾರ 10 ಮಂದಿ ಪೊಲೀಸರಿಗೆ ಹಾಗೂ ಜೈಲಿನಲ್ಲಿದ್ದ ಒಬ್ಬ ಆರೋಪಿಗೆ ಸೋಂಕು ದೃಢವಾಗಿದೆ. ನಗರಠಾಣೆ ಮತ್ತು ಪೊಲೀಸ್ ವಸತಿಗೃಹದಲ್ಲಿನ ಕೃಷ್ಣ ಬ್ಲಾಕ್‌ನ ಕೆಲವು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಸೋಂಕಿನಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಮಂದಿ ಗುಣಮುಖರಾಗಿದ್ದು ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೂ ಒಟ್ಟಾರೆ 154 ಮಂದಿ ಗುಣಮುಖರಾಗಿದ್ದಾರೆ. 395 ಸಕ್ರಿಯ ಪ್ರಕರಣಗಳು ಇನ್ನೂ ಇವೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.


ತಾಲ್ಲೂಕು;ಇಂದಿನ ಸೋಂಕಿತರು (ಜು.13);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;2;30;0
ಗುಬ್ಬಿ;0;30;1
ಕೊರಟಗೆರೆ;1;35;1
ಕುಣಿಗಲ್;2;29;1
ಮಧುಗಿರಿ;1;45;1
ಪಾವಗಡ;4;61;0
ಶಿರಾ;1;52;1
ತಿಪಟೂರು;5;23;0
ತುಮಕೂರು;31;238;11
ತುರುವೇಕೆರೆ;5;22;0
ಒಟ್ಟು;52;565;16

ಮತ್ತೆ 10 ಮಂದಿ ಪೊಲೀಸರಿಗೆ ಸೋಂಕು

ಕೆಎಸ್‌ಆರ್‌ಪಿ ಹಾಗೂ ಸಿವಿಲ್ ಪೊಲೀಸರು ಸೇರಿದಂತೆ 10 ಮಂದಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಹಿಂದೆ 25 ಮಂದಿ ಪೊಲೀಸರಿಗೆ ಸೋಂಕು ತಗುಲಿತ್ತು.

***

ತುಮಕೂರಲ್ಲಿ ಎಲ್ಲೆಲ್ಲಿ ಸೋಂಕು

ಪಿ.ಎಚ್.ಕಾಲೊನಿ, ಕೃಷ್ಣನಗರ, ದೇವರಾಯಪಟ್ಟಣ, ಇಸ್ಮಾಯಿಲ್ ನಗರ, ಎಸ್‌ಐಟಿ 16ನೇ ಕ್ರಾಸ್, ಶಿರಾ ಗೇಟ್, ಬನಶಂಕರಿ, ಉಪ್ಪಾರಹಳ್ಳಿ, ಹನುಮಂತಪುರ, ಸಪ್ತಗಿರಿ ಬಡಾವಣೆ, ಎಸ್‌.ಎಸ್.ಪುರಂ, ಶ್ರೀನಗರ, ವಿದ್ಯಾನಗರ, ರಾಮನಹಳ್ಳಿ, ಗೂಳೂರು, ಮಲ್ಲಸಂದ್ರ, ಹೆಗ್ಗೆರೆಯಲ್ಲಿ ಮಂಗಳವಾರ ಸೋಂಕಿಯರು ಕಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT