ಮಂಗಳವಾರ, ಅಕ್ಟೋಬರ್ 20, 2020
21 °C

ಕೋವಿಡ್: ತುಮಕೂರು ಜಿಲ್ಲೆಯಲ್ಲಿ 336ಕ್ಕೇರಿದ ಮೃತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬುಧವಾರ ಮತ್ತೆ ಐದು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಸಂಖ್ಯೆ 336ಕ್ಕೆ ತಲುಪಿದೆ.

ಮತ್ತೆ 307 ಮಂದಿಗೆ ಸೋಂಕು ದೃಢವಾಗಿದೆ. ತುಮಕೂರು ತಾಲ್ಲೂಕಿನ 93, ಚಿಕ್ಕನಾಯಕನಹಳ್ಳಿ 11, ಗುಬ್ಬಿ 25, ಕೊರಟಗೆರೆ 17, ಕುಣಿಗಲ್ 13, ಮಧುಗಿರಿ 29, ಪಾವಗಡ 19, ಶಿರಾ 39, ತಿಪಟೂರು 40, ತುರುವೇಕೆರೆ ತಾಲ್ಲೂಕಿನ 21 ಮಂದಿಗೆ ಸೋಂಕು ದೃಢವಾಗಿದೆ. ಇವರಲ್ಲಿ 182 ಪುರುಷರು ಹಾಗೂ 125 ಮಹಿಳೆಯರು ಇದ್ದಾರೆ. 

ತುಮಕೂರಿನ ಗೋಕುಲ ಬಡಾವಣೆ 73 ವರ್ಷದ ಪುರುಷ, ಕ್ಯಾತ್ಸಂದ್ರದ 49 ವರ್ಷದ ಪುರುಷ, ತುರುವೇಕೆರೆ ತಾಲ್ಲೂಕು ಅಮ್ಮಸಂದ್ರದ 40 ವರ್ಷದ ಪುರುಷ, ಪಾವಗಡದ ಬನಶಂಕರಿ ಬಡಾವಣೆ 67 ವರ್ಷದ ಪುರುಷ, ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ 66 ವರ್ಷದ ಮಹಿಳೆ ಮೃತರಾಗಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಕೊರೊನಾ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 248 ಮಂದಿ ಗುಣಮುಖರಾಗಿ ಬುಧವಾರ ಮನೆಗಳಿಗೆ ತೆರಳಿದರು. ಒಟ್ಟು 12,669 ಮಂದಿ ಗುಣಮುಖರಾಗಿದ್ದು 2,660 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು