ಬುಧವಾರ, ಜೂನ್ 23, 2021
28 °C

ತುಮಕೂರು: ಮತ್ತೆ 15 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಸಾವನ್ನಪ್ಪುವುದು ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಕಳೆದ 24 ಗಂಟೆಗಳ ಅಂತರದಲ್ಲಿ 15 ಮಂದಿ ಮೃತಪಟ್ಟಿದ್ದಾರೆ.

8 ಪುರುಷರು, 7 ಮಹಿಳೆಯರು ಸೇರಿದ್ದಾರೆ. ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ 5, ಶಿರಾ, ಪಾವಗಡ ತಾಲ್ಲೂಕಿನಲ್ಲಿ ತಲಾ 3, ಗುಬ್ಬಿ 2, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಸಾವು ಕಂಡಿದ್ದಾರೆ.

ತುಮಕೂರು ಉಪ್ಪಾರಹಳ್ಳಿ 60 ವರ್ಷದ ಪುರುಷ, ವಿನೋಬನಗರದ 71 ವರ್ಷದ ಪುರುಷ, ಎಸ್‌ಐಟಿ ಬಡಾವಣೆ 50 ವರ್ಷದ ಮಹಿಳೆ, ಬಟವಾಡಿ 53 ವರ್ಷದ ಮಹಿಳೆ, ಸರಸ್ವತಿಪುರಂ 42 ವರ್ಷ ಪುರುಷ ಸಾವನ್ನಪ್ಪಿದ್ದಾರೆ.

ಶಿರಾ ತಾಲ್ಲೂಕು ಭುವನಹಳ್ಳಿ 73 ವರ್ಷದ ಪುರುಷ, ಕಲ್ಲಾಪುರದ 63 ವರ್ಷದ ಮಹಿಳೆ, ಸೋರೆಕುಂಟೆ ಗ್ರಾಮದಲ್ಲಿ 60 ವರ್ಷದ ಪುರುಷ; ಪಾವಗಡ ಪಟ್ಟಣದ 30 ವರ್ಷ, 55 ವರ್ಷದ ಮಹಿಳೆ, ತಾಲ್ಲೂಕು ಓಬಳಾಪುರದ 30 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಗುಬ್ಬಿ ಪಟ್ಟಣದ 57 ವರ್ಷದ ಪುರುಷ, ಮಾರುತಿ ನಗರದ 65 ವರ್ಷದ ಪುರುಷ; ತಿಪಟೂರು ನಗರದ 38 ವರ್ಷದ ಮಹಿಳೆ; ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊನ್ನೇಬಾಗಿ ಗ್ರಾಮದ 58 ವರ್ಷದ ಮಹಿಳೆ ಸಾವನ್ನಪ್ಪಿದವರು.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 793, ಚಿಕ್ಕನಾಯಕನಹಳ್ಳಿ 203, ಗುಬ್ಬಿ 148, ಕೊರಟಗೆರೆ 106, ಕುಣಿಗಲ್ 66, ಮಧುಗಿರಿ 115, ಪಾವಗಡ 93, ಶಿರಾ 100, ತಿಪಟೂರು 314, ತುರುವೇಕೆರೆ ತಾಲ್ಲೂಕಿನಲ್ಲಿ 218 ಜನರಿಗೆ ಸೋಂಕು ಖಚಿತಪಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು