ಬುಧವಾರ, ಮೇ 27, 2020
27 °C

ರಸ್ತೆಗಾಗಿ ಸಂಘರ್ಷ; ವೃದ್ಧೆ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ರಾಯಗೋನಹಳ್ಳಿ ಗ್ರಾಮದ ರಸ್ತೆ ವಿವಾದದ ಸಂಘರ್ಷ ವೃದ್ಧೆ ಲಕ್ಷ್ಮಮ್ಮ (60) ಎಂಬುವವರ ಬಲಿ ಪಡೆದಿದೆ.

ಎರಡು ವರ್ಷದಿಂದ ಗ್ರಾಮದ ರಸ್ತೆ ನಿರ್ಮಾಣದ ವಿಚಾರದಲ್ಲಿ ಲಕ್ಷ್ಮಮ್ಮ ಮತ್ತು ಕೃಷ್ಣಪ್ಪ ಅವರ ಕುಟುಂಬದ ನಡುವೆ ವಾದವಿವಾದಗಳು ನಡೆಯುತ್ತಿದ್ದವು. ಪ್ರಕರಣ ಪೊಲೀಸ್ ಠಾಣೆ ಮತ್ತು ನ್ಯಾಯಾಲದ ಮೆಟ್ಟಿಲೇರಿತ್ತು.

ರಸ್ತೆಯ ಕಾಮಗಾರಿ ಅಪೂರ್ಣವಾಗಿದ್ದು, ಲಕ್ಷ್ಮಮ್ಮ ಭಾನುವಾರ ಸಂಬಂಧಿಯ ಅಂತ್ಯಕ್ರಿಯೆಗಾಗಿ ಊರಿಗೆ ಹೋಗಿದ್ದಾಗ, ಕೃಷ್ಣಪ್ಪ ಮತ್ತು ಕುಟುಂಬವರ್ಗದವರು ಸೋಮುವಾರ ಬೆಳಿಗ್ಗೆ ಜೆಸಿಪಿ ಬಳಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯತ್ನಿಸಿದರು. ಈ ಸಮಯದಲ್ಲಿ ಲಕ್ಷ್ಮಮ್ಮ ಅವರ ಮಗ ರಂಗಸ್ವಾಮಿ, ಮಗಳು ನರಸಮ್ಮ ತಡೆಯಲು ಯತ್ನಿಸಿದಾಗ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನೆಡೆಯಿತು.

ಅಂತ್ಯಕ್ರಿಯೆ ಮುಗಿಸಿ ಬಂದ ಲಕ್ಷ್ಮಮ್ಮ ಸಹ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದಾಗ ಕೃಷ್ಣಪ್ಪ ಅವರ ಗುಂಪು ದೊಣ್ಣೆಗಳಿಂದ ಹಲ್ಲೆ ನಡೆಸಿತು. ಲಕ್ಷ್ಮಮ್ಮ ಮತ್ತು ರಂಗಸ್ವಾಮಿ ತಲೆಗೆ ತೀವ್ರಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ಷ್ಮಮ್ಮ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಪ್ಪ ಅವರು ಸಾಕಿದ ನಾಯಿಗಳು ದಾಳಿ ನಡೆಸಿದ ಸಮಯದಲ್ಲಿ ಲಕ್ಷ್ಮಮ್ಮನ ಮಗಳು ನರಸಮ್ಮ ಅವರಿಗೂ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪೊಲೀಸರು ಕೃಷ್ಣಪ್ಪ ಮತ್ತು ಕುಟುಂಬದವರ ಬಂಧನಕ್ಕೆ ತೀವ್ರಯತ್ನ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.