ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಉದ್ಯಮಿಗಳಿಗೆ ಧಮಕಿ, ಹಣಕ್ಕೆ ಬೇಡಿಕೆ: ನಾಲ್ವರ ಬಂಧನ

ಮಂಡಿಪೇಟೆ ಉದ್ಯಮಿಗಳಿಗೆ ಜೀವ ಬೆದರಿಕೆ ಪ್ರಕರಣ
Last Updated 13 ಆಗಸ್ಟ್ 2020, 16:37 IST
ಅಕ್ಷರ ಗಾತ್ರ

ತುಮಕೂರು: ನಗರದ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ನಾಲ್ಕು ಮಂದಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಸದಾಶಿವನಗರದ ಆಲಿ ಹುಸೇನ್ (40), ಶಾನ್‍ವಾಜ್‍ಪಾಷ (40), ಪಿ.ಎಚ್.ಕಾಲೊನಿ ಸೈಯದ್‍ಶವರ್ (34), ಬೆಂಗಳೂರು ಯಶವಂತಪುರದ ಮೆಹಬೂಬ್‍ಖಾನ್ (40) ಬಂಧಿತರು. ಮತ್ತೊಬ್ಬ ಆರೋಪಿ ಸ್ಟೈಲ್ ಇಮ್ರಾನ್ ತಲೆಮರೆಸಿಕೊಂಡಿದ್ದಾರೆ.

ಮಂಡಿಪೇಟೆ ಇಬ್ಬರು ಆಯಿಲ್ ಉದ್ಯಮಿಗಳು ಹಾಗೂ ಮತ್ತೊಬ್ಬ ಉದ್ಯಮಿಗೆ ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್ ಕರೆ ಮತ್ತು ಸಂದೇಶದ ಮೂಲಕ ಬೆದರಿಕೆ ಹಾಕಿದ್ದಾರೆ. ‘ಒಂದು ವಾರದ ಹಿಂದೆ ನಿಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದನ್ನು ಮರೆತಿದ್ದೀರಾ. ಅದು ಕೇವಲ ಸ್ಯಾಂಪಲ್. ನಮ್ಮ ಬೇಡಿಕೆ ಈಡೇರಿಸಿ’ ಎಂದು ಕರೆ ಮಾಡಿ ಧಮ್ಕಿಹಾಕಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇದೇ ರೀತಿ ಮಂಡೀಪೇಟೆ ಮತ್ತೊಬ್ಬ ಉದ್ಯಮಿ ವಾಲ್ಮೀಕಿ ನಗರದ ತನ್ನ ಮನೆಯ ಬಳಿ ಕಾರಿನಲ್ಲಿ ಬರುತ್ತಿದ್ದಾಗ ರಾತ್ರಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು. ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ನಗರ ವೃತ್ತ ನಿರೀಕ್ಷಕ ಬಿ.ನವೀನ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್‍ಗಳು, ಸಿಮ್‍ಗಳು, 1 ಆಟೊ, 1 ಬೈಕ್, 1 ಮಚ್ಚು, ₹ 1,000 ಹಣ ವಶಪಡಿಸಿಕೊಳ್ಳಲಾಗಿದೆ.

ಪಿಎಸ್‌ಐ ಬಿ.ಸಿ.ಮಂಜುನಾಥ್, ಎಎಸ್‌ಐ ಮಂಜುನಾಥ, ರಾಮಚಂದ್ರಯ್ಯ, ನವೀನ್‍ಕುಮಾರ್, ಪ್ರಸನ್ನಕುಮಾರ್, ಜಗದೀಶ್, ಈರಣ್ಣ, ಶಿವಶಂಕರ, ರಮೇಶ್, ಸೈಮನ್ ವಿಕ್ಟರ್, ಹನುಮರಂಗಯ್ಯ, ಸಿದ್ದೇಶ್ವರ, ದೇವರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT