ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್, ಭಯೋತ್ಪಾದಕರಿಗೆ ಕಾಂಗ್ರೆಸ್ ಸಹಕಾರ: ಸಿ.ಟಿ.ರವಿ ಆರೋಪ

Last Updated 16 ಡಿಸೆಂಬರ್ 2019, 7:40 IST
ಅಕ್ಷರ ಗಾತ್ರ

ತುಮಕೂರು:‘ಪೌರತ್ವ ಕಾಯ್ದೆ ವಿಚಾರವಾಗಿ ಪಿತೂರಿ ನಡೆಯುತ್ತಿದ್ದು, ಆ ಪಿತೂರಿಯಲ್ಲಿ ತಾಲಿಬಾನಿಗಳು, ಕಾಂಗ್ರೆಸಿಗರು, ಕಮ್ಯೂನಿಸ್ಟ್‌ ಒಟ್ಟಾಗಿದ್ದಾರೆ’ ಎಂದು ಸಚಿವ ಸಿ.ಟಿ.ರವಿ ಆರೋಪಿಸಿದರು.

ತುಮಕೂರು ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಾಕಿಸ್ತಾನ, ಬಾಂಗ್ಲಾದೇಶ, ಆಫಘಾನಿಸ್ಥಾನದಿಂದ ಧಾರ್ಮಿಕ ಕಾರಣ ಮತ್ತು ಭಯೋತ್ಪಾದಕ ಕಾರಣಕ್ಕೆ ಬಂದವರು ನಿರಾಶ್ರಿತರು. ಅವರಿಗಿದ್ದಿದ್ದು ಮೂರೇ ದಾರಿ ಸಾವು, ಮತಾಂತರ, ಪೂರ್ವಜನರನ್ನು ತೊರೆಯುವುದು. ಇಂತಹ ನಿರಾಶ್ರಿತರಿಗೆ ಭಾರತ ಆಶ್ರಯ, ಪೌರತ್ವ ಕೊಡದೇ ಬೇರೆ ಯಾರು ಕೊಡಬೇಕು ಎಂದು ಪೌರತ್ವ ಕಾಯ್ದೆ ವಿರೋಧಿಸುವವರಿಗೆ ಕೇಳಲು ಬಯಸುತ್ತೇನೆ’ ಎಂದರು.

‘ನಿರಾಶ್ರಿತರಿಗೆ ಪೌರತ್ವ ಕೊಡುವುದು ತಪ್ಪು ಎನ್ನುವುದಾದರೇ ಪಾಕಿಸ್ತಾನ ರಚನೆಗೆ ಅಂದು ಕಾಂಗ್ರೆಸ್ ಅವಕಾಶ ಏಕೆ ಅವಕಾಶ ಕೊಟ್ಟಿತು. ಅಂದು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದ ಪಾಪದ ಕೂಸಿನ ಪರಿಣಾಮ ಇಂದು ಜನ ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ಹೇಳಿದರು.

‘ಪಾಕಿಸ್ತಾನ, ಬಾಂಗ್ಲದೇಶದಲ್ಲಿ ನಮ್ಮ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್ನರು ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕಾಗಿ ಅವರಿಗೆ ಪೌರತ್ವ ಕೊಡುವ ತಿರ್ಮಾನ ತೆಗೆದುಕೊಂಡಿದ್ದೇವೆ. ಅದನ್ನ ವಿರೋಧ ಮಾಡುವಷ್ಟೇ ವಿರೋಧವನ್ನು ಪಾಕಿಸ್ತಾನ ರಚನೆಗೆ ಮಾಡಿದ್ರೆ ಪಾಕಿಸ್ತಾನ ಹುಟ್ಟುತ್ತಲೆ ಇರಲಿಲ್ಲ. ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು ಅದಕ್ಕೆ ಅವರೇ ಹೊಣೆ’ ಎಂದು ವಾಗ್ದಾಳಿ ನಡೆಸಿದರು.

‘ಭಯೋತ್ಪಾದಕರಿಗೆ ಪೌರತ್ವ ಕೊಡಬೇಕು ಎಂದು ಕಾಂಗ್ರೆಸ್ ಭಯಸುತ್ತಿದೆ. ಭಯೋತ್ಪಾದಕರಿಗೆ ಪೌರತ್ವ ಕೊಟ್ಟರೆ ದೇಶದ ಕಥೆ ಏನಾಗಬೇಕು. ದೇಶದ ನಾಗರಿಕರ ರಕ್ಷಣೆ ನಮ್ಮ ಕರ್ತವ್ಯ ಅದನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.

ತಾಲಿಬಾನ್‌ಗಳೊಂದಿಗೆ ಕೈ ಜೋಡಿಸಿದ ಕಾಂಗ್ರೆಸ್:

‘ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ತಾಲಿಬಾನಿಗಳ ಜತೆ ಸೇರಿ ಮೋದಿ ಸರ್ಕಾರ ಉರುಳಿಸುವ ಕೆಲಸ ಮಾಡುತ್ತಿವೆ. ಅದಕ್ಕೆ ದೇಶದ ಜನರು ಅವಕಾಶ ಕೊಡುವುದಿಲ್ಲ, ಇವರ ಹುನ್ನಾರ ನಮಗೆ ಗೊತ್ತಿದೆ. ನಾವು ಅದನ್ನು ಬಯಲಿಗೆಳೆಯುತ್ತೇವೆ’ ಎಂದರು.

ಇಲ್ಲೇ ಹುಟ್ಟಿ ಬೆಳೆದಿರುವ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ

‘ಇಲ್ಲೆ ಹುಟ್ಟಿ ಬೆಳೆದ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ. ಅವರು ನಮ್ಮಂತೆ ಭಾರತೀಯರು. ಆದರೆ, ಬಾಂಗ್ಲಾದೇಶ ಪಾಕಿಸ್ತಾನ ಅಫ್ಘಾನಿಸ್ತಾನದಿಂದ ಬಂದ ಮುಸಲ್ಮಾನರು ನಿರಾಶ್ರಿತರಲ್ಲ. ಅವರು ಅಕ್ರಮ ನುಸುಳುಕೋರರಾಗಿ ಬಂದವರು. ಇಲ್ಲಿನ ಸಂಪತ್ತಿನ ಆಸೆಗಾಗಿ ಬಂದವರು. ಇಂಥವರಿಗೆ ಪೌರತ್ವ ಏಕೆ ಕೊಡಬೇಕು? ನಿರಾಶ್ರಿತರನ್ನು ಮತ್ತು ಅಕ್ರಮ ನುಸುಳುಕೋರರನ್ನು ಒಂದೇ ರೀತಿಯಾಗಿ ನೋಡುವುದು ದೇಶದ ಭದ್ರತೆಗೆ ಅಪಾಯಕಾರಿ’ ಎಂದರು.

ಕಾಂಗ್ರೆಸ್‌ನಲ್ಲಿರುವ ದೇಶಭಕ್ತರೆ ಹೊರಬನ್ನಿ

‘ಪಾಕಿಸ್ತಾನ ರಚನೆಯಾಗಬೇಕಾದರೆ ಶೇ 23 ರಷ್ಟು ಹಿಂದೂಗಳು ಪಾಕಿಸ್ತಾನದಲ್ಲು ಇದ್ದರು. ಆದರೆ ಈಗ ಅಲ್ಲಿ ಕೇವಲ ಶೇ ಹಿಂದೂಗಳಿದ್ದಾರೆ. ಉಳಿದ ಶೇ 21 ರಷ್ಟು ಹಿಂದೂಗಳು ಮತಾಂತರ ಇಲ್ಲವೇ ಸಾವು ಇಲ್ಲವೇ ದೇಶ ಬಿಟ್ಟು ಬಂದಿದ್ದಾರೆ. ಆದರೆ, ಭಾರತದಲ್ಲಿ ಶೇ 9 ರಷ್ಟು ಇದ್ದ ಮುಸಲ್ಮಾನರು ಶೇ 14ಕ್ಕೆ ಏರಿದ್ದಾರೆ. ಈ ಬಗ್ಗೆ ನಾವು ಅಭಿಯಾನ ಮಾಡುತ್ತೇವೆ. ಇದು ಕೇವಲ ಬಿಜೆಪಿಯ ಕರ್ತವ್ಯ ಮಾತ್ರ ಅಲ್ಲ. ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯ. ದೇಶಭಕ್ತರು ಯಾರಾದರೂ ಕಾಂಗ್ರೆಸ್‌‌ನಲ್ಲಿದ್ದರೆ ಪಕ್ಷ ಬಿಟ್ಟು ಹೊರಬನ್ನಿ. ನೀವು ಅಲ್ಲಿರಲು ಸೂಕ್ತ ವೇದಿಕೆ ಅಲ್ಲ. ಕಾಂಗ್ರೆಸ್ ತಾಲಿಬಾನಿಗೆ ದೇಶದ್ರೋಹಿಗಳಿಗೆ ಬೆಂಬಲವಾಗಿ ನಿಂತಿದೆ’ ಎಂದು ಅರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT