ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಗವಾಧ್ವಜಕ್ಕೆ ಹಾನಿ: ಇಬ್ಬರ ವಿರುದ್ಧ ಪ್ರಕರಣ

Published : 21 ಸೆಪ್ಟೆಂಬರ್ 2024, 0:22 IST
Last Updated : 21 ಸೆಪ್ಟೆಂಬರ್ 2024, 0:22 IST
ಫಾಲೋ ಮಾಡಿ
Comments

ತುಮಕೂರು: ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಕುರಿತು ಪ್ರಚಾರ ಮಾಡುತ್ತಿದ್ದ ಆಟೊ ತಡೆದು, ಪ್ರಚಾರಕ್ಕೆ ಅಡ್ಡಿಪಡಿಸಿ ಭಗವಾಧ್ವಜಕ್ಕೆ ಹಾನಿ ಮಾಡಿದ ಆರೋಪದ ಮೇಲೆ ನಗರದ ಇರ್ಷಾದ್‌, ಇಲಿಯಾಸ್‌ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗುಬ್ಬಿ ಗೇಟ್‌ ಸಮೀಪ ಆಟೊ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಟೊಗೆ ಕಟ್ಟಿದ್ದ ಭಗವಾಧ್ವಜ ಮುರಿದು ಪ್ರಚಾರ ನಿಲ್ಲಿಸು, ಇಲ್ಲದಿದ್ದರೆ ಇಲ್ಲಿಯೇ ಮುಗಿಸಿಬಿಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದರು. ದ್ವೇಷ ಭಾವನೆಯಿಂದ ಇಂತಹ ಕೆಲಸ ಮಾಡಿದ್ದಾರೆ’ ಎಂದು ಆಟೊ ಚಾಲಕ ಸಿದ್ಧಲಿಂಗ ಆರಾಧ್ಯ ಎಂಬುವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT