ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್ ಧರಣಿ ಸ್ಥಳಕ್ಕೆ ಬಂದು, ಕಟ್ಟಡ ಮಾಲೀಕರಿಗೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಕಟ್ಟಡ ಪರವಾನಗಿ ರದ್ದು ಮಾಡಲಾಗಿದೆ. ಕಾಮಗಾರಿ ಮುಂದುವರೆಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್ ನೀಡಲಾಗಿದೆ ಎಂದು ಧರಣಿ ನಿರತರಿಗೆ ನೋಟಿಸ್ ಪ್ರತಿ ನೀಡಿದರು.