ತುಮಕೂರು: ಇದೇ ಮೊದಲ ಬಾರಿಗೆ ಜಿಲ್ಲಾ ಆಡಳಿತದಿಂದ ದಸರಾ ಆಚರಣೆ ಮಾಡುತ್ತಿದ್ದು, ಕೊನೆಯ ಎರಡು ದಿನಗಳು ಮತ್ತಷ್ಟು ರಂಗೇರಲಿದೆ.

ನಗರದ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪಿಸಿದ್ದು, ಪ್ರತಿನಿತ್ಯವೂ ಪೂಜೆ ಸಲ್ಲುತ್ತಿದೆ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಯುವ ದಸರಾ ಯುವ ಸಮೂಹವನ್ನು ಸೆಳೆಯುತ್ತಿದೆ.

ಅ. 2ರಂದು ದಸರಾ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗಿತ್ತು. ಅಂದಿನಿಂದ ವಿವಿಧ ಚಟುವಟಿಕೆಗಳು ನಡೆದುಕೊಂಡು ಬಂದಿವೆ. ಕೊನೆಯ ಎರಡು ದಿನ ಶುಕ್ರವಾರ, ಶನಿವಾರ ಜನರನ್ನು ಆಕರ್ಷಿಸುವಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಚ್‌ಎಎಲ್‌ನಿಂದ ಹೆಲಿಕಾಪ್ಟರ್ ಪ್ರದರ್ಶನ ನಡೆಯಲಿದ್ದು, ಕಾಲೇಜು ಮೈದಾನಕ್ಕೆ ಬಂದು ನಿಂತಿದೆ. ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಡಕುಸ್ತಿ, ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ವಸ್ತು ಪ್ರದರ್ಶನ ಏರ್ಪಡಿಸಿವೆ.

ಶುಕ್ರವಾರ ನಟ ಶಿವರಾಜ್ ಕುಮಾರ್ ಭಾಗವಹಿಸಲಿದ್ದು, ದಸರಾ ಮತ್ತಷ್ಟು ಆಕರ್ಷಣೆ ಪಡೆದುಕೊಳ್ಳಲಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಕಂಬದ ರಂಗಯ್ಯ ಅವರ ಸಂಗೀತ ಕಾರ್ಯಕ್ರಮ ಯುವ ಸಮೂಹವನ್ನು ಆಕರ್ಷಿಸಲಿದೆ.

ಮೈಸೂರು ಮಾದರಿ: ನಗರದಲ್ಲಿ ಶನಿವಾರ ವಿಜಯದಶಮಿಯಂದು ಮೈಸೂರು ದಸರಾ ಮಾದರಿಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಸಲು ಜಿಲ್ಲಾ ಆಡಳಿತ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜನರ ಗಮನ ಸೆಳೆಯಲಿದೆ. ಸುಮಾರು ಒಂದೂವರೆ ಕಿ.ಮೀ ಉದ್ದದ ಮೆರವಣಿಗೆ ಸಾಗಲಿದೆ.

ಅಲಂಕಾರಗೊಂಡ ಆನೆಯ ಮೇಲೆ ನಾಡ ದೇವತೆ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಮೆರವಣಿ ರಂಗು ಪಡೆದುಕೊಳ್ಳಲಿದೆ. ಪೊಲೀಸ್ ಇಲಾಖೆಯ ಅಶ್ವದಳ, ಜನಪದ ಕಲಾ ತಂಡಗಳು, ಗತವೈಭವ ಸಾರುವ ವಿಂಟೇಜ್ ಕಾರುಗಳು, ಪೊಲೀಸ್, ಎನ್‌ಸಿಸಿ ಬ್ಯಾಂಡ್, 20 ಜೊತೆ ಎತ್ತುಗಳು, ಅಲಂಕೃತಗೊಂಡ ಟ್ರ್ಯಾಕ್ಟರ್‌ಗಳಲ್ಲಿ ನಗರ ಹಾಗೂ ಜಿಲ್ಲೆಯ 50ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು, ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ನಗರದ ಬಿಜಿಎಸ್ ವೃತ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವ.ಜಿ.ಪರಮೇಶ್ವರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಮೆರವಣಿಗೆ: ಬಿಜಿಎಸ್ ವೃತ್ತದಿಂದ ಆರಂಭವಾಗುವ ಮೆರವಣಿಗೆ ಕೊನೆಗೆ ಕಾಲೇಜು ಮೈದಾನ ತಲುಪಲಿದೆ. ನಂತರ ಕಾಲೇಜು ಮೈದಾನದಲ್ಲಿ ದೇವರುಗಳಿಗೆ ಶಮಿ ಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ಕೊನೆಯಲ್ಲಿ ಬಾಣಬಿರುಸು, ಸಿಡಿಮದ್ದಿನ ಆಕರ್ಷಣೆ ಮತ್ತಷ್ಟು ಮೆರಗು ನೀಡಲಿದೆ. ಇದರೊಂದಿಗೆ ದಸರಾಗೆ ತೆರೆ ಬೀಳಲಿದೆ.

ಇಂದು ಮಿನಿ ಮ್ಯಾರಥಾನ್

ತುಮಕೂರು ದಸರಾ ಉತ್ಸವ ಪ್ರಯುಕ್ತ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅ. 11ರಂದು ಬೆಳಿಗ್ಗೆ 7 ಗಂಟೆಗೆ ಮಿನಿ ಮ್ಯಾರಥಾನ್ ಆಯೋಜಿಸಲಾಗಿದೆ. ಮ್ಯಾರಥಾನ್‍ನಲ್ಲಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳಬಹುದು. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಗದು ಬಹುಮಾನ (ಮೊದಲ ಆರು ಸ್ಥಾನ ಪಡೆದವರಿಗೆ) ನೀಡಲಾಗುತ್ತದೆ. ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಎಸ್‌ಎಸ್ ವೃತ್ತ ಎಸ್‍ಐಟಿ ಗಂಗೋತ್ರಿ ರಸ್ತೆ ಎಸ್‍ಎಸ್‍ಪುರಂ ಮುಖ್ಯರಸ್ತೆ ಭದ್ರಮ್ಮ ವೃತ್ತ ಬಿಜಿಎಸ್ ವೃತ್ತ ಕಾಲ್‍ಟ್ಯಾಕ್ಸ್ ಗುಬ್ಬಿ ಗೇಟ್ ದಿಬ್ಬೂರು ಕ್ರಾಸ್ ಜೋಡಿ ರಸ್ತೆ ಅಮಾನಿಕೆರೆ ರಸ್ತೆ ಜಿಲ್ಲಾಧಿಕಾರಿ ಕಚೇರಿ ರಸ್ತೆ ಕೋತಿ ತೋಪು ತಮ್ಮಯ್ಯ ಆಸ್ಪತ್ರೆ ವೃತ್ತದ ಮೂಲಕ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.