ಶುಕ್ರವಾರ, ಸೆಪ್ಟೆಂಬರ್ 24, 2021
27 °C
ತಿ‍ಪಟೂರು ತಾಲ್ಲೂಕಿನ ಹತ್ಯಾಳ ನರಸಿಂಹಸ್ವಾಮಿ ಬೆಟ್ಟದಲ್ಲಿ ಅವಘಡ

ದೇವರ ದರ್ಶನಕ್ಕೆ ತೆರಳಿದವರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ತಾಲ್ಲೂಕಿನ ಹತ್ಯಾಳ ನರಸಿಂಹಸ್ವಾಮಿ ಬೆಟ್ಟದಿಂದ ಇಳಿಯುತ್ತಿದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಐದು ಮಂದಿ ಮೃತಪಟ್ಟಿದ್ದಾರೆ. 12 ಜನ ತೀವ್ರ ಗಾಯಗೊಂಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಾದಾಪುರದ ಶಂಕರಮ್ಮ (55), ಶಿವಲಿಂಗಯ್ಯ (50), ಶಂಕರಪ್ಪ (60), ನಾಗರಾಜು (43), ಭುವನ (9) ಮೃತರು.

ಟ್ರಾಕ್ಟರ್‌ನಲ್ಲಿ 16ಕ್ಕೂ ಹೆಚ್ಚು ಜನ ನರಸಿಂಹಸ್ವಾಮಿಗೆ ಹರಿಸೇವೆ ಸಲ್ಲಿಸಲು ತೆರಳಿದ್ದರು. ಗ್ರಾಮಕ್ಕೆ ಹಿಂದಿರುಗಿ ಬರುತ್ತಿದ್ದಾಗ ತೀವ್ರ ಇಳಿಜಾರಿನಲ್ಲಿ  ಟ್ರಾಕ್ಟರ್ ಇದ್ದಕ್ಕಿದ್ದಂತೆ ನ್ಯೂಟ್ರಲ್‍ಗೆ ಬಿದ್ದಿದೆ. ವೇಗ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಚಾಲಕ ಪ್ರಯತ್ನಿಸಿದಾಗ ಎಡ ಭಾಗದ ಬೆಟ್ಟದ ಗೋಡೆಗೆ ತಾಗಿ ಪಲ್ಟಿಯಾಗಿದೆ. ಬಲ ಭಾಗದಲ್ಲಿ ತಡೆಗೋಡೆ ಇದ್ದಿದ್ದರಿಂದ ಸುಮಾರು ಅಡಿ ಪ್ರಪಾತಕ್ಕೆ ಬೀಳಬೇಕಿದ್ದ ಟ್ರಾಕ್ಟರ್ ರಸ್ತೆಯಲ್ಲಿಯೇ ಉರುಳಿದೆ.

ಗಾಯಾಳುಗಳನ್ನು ಚಿಕ್ಕನಾಯಕನಹಳ್ಳಿ ಮತ್ತು ತುಮಕೂರು ಆಸ್ಪತ್ರೆಗೆ  ದಾಖಲಿಸಲಾಗಿದೆ. ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಕಿಬ್ಬನಹಳ್ಳಿ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕಿಬ್ಬನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.