ಕೊರಟಗೆರೆ: ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟ್ಟಣದಲ್ಲಿ ಮಂಗಳವಾರ ಬಹೃತ್ ಜನ ಆಂದೋಲನ ಮೆರವಣಿಗೆ ನಡೆಸಿದರು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬಹೃತ್ ಮೆರವಣಿಗೆ ಮೂಲಕ ಸಾಗಿ ಎಸ್ಎಸ್ಆರ್ ವೃತ್ತದ ಮುಖ್ಯ ಬಸ್ ನಿಲ್ದಾಣದಲ್ಲಿ ಸೇರಿ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಒತ್ತಾಯಿಸಿದರು.

ಜಿ.ಪರಮೇಶ್ವರ ಅವರು ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡಿ 2013ರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಆಗ ಅವರು ಸೋತ ಕಾರಣದಿಂದ ಮುಖ್ಯಮಂತ್ರಿ ಸ್ಥಾನ ಕೈತಪ್ಪಿತು. ಈಗ ದಲಿತರಿಗೆ ಅವಕಾಶ ನೀಡಿ, ಕಾಂಗ್ರೆಸ್ನ ನಿಷ್ಟಾವಂತ ಹಾಗೂ ಅನುಭವಿ ರಾಜಕಾರಣಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದು, ಪರಮೇಶ್ವರ ಅವರನ್ನೇ ಮುಖ್ಯಮಂತ್ರಿ ಮಾಡುವ ಮೂಲಕ ತುಮಕೂರು ಜಿಲ್ಲೆಗೆ ಅವಕಾಶ ಮಾಡಿಕೊಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಯವಕರು ಬೈಕ್ ರ್ಯಾಲಿ ನಡೆಸಿದರು.

ಅಠವಿ ಮಠದ ಶಿವಲಿಂಗಮಹಾಸ್ವಾಮೀಜಿ, ಆದಿಜಾಂಬವ ಮಠದ ಷಡಕ್ಷರಿ ಮಹಾಮುನಿ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮೆಡಿಕಲ್ ಅಶ್ವತ್ಥ್, ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ಯುವ ಘಟಕದ ಅಧ್ಯಕ್ಷ ಬೈರೇಶ್ ಹಾಗೂ ಎಚ್.ಕೆ.ಮಹಾಲಿಂಗಪ್ಪ, ಎ.ಡಿ.ಬಲರಾಮಯ್ಯ, ಬಿ.ಎಸ್. ದಿನೇಶ್, ಟಿ.ಡಿ.ಪ್ರಸನ್ನಕುಮಾರ್, ಕೆಂಪಣ್ಣ, ಕೆ.ವಿ.ಮಂಜುನಾಥ್, ಕೆ.ಆರ್. ಓಬಳರಾಜು, ಜಿ.ಎಸ್.ರವಿಕುಮಾರ್, ವಿನಯ್, ಗೊಂದಿಹಳ್ಳಿ ರಂಗರಾಜು, ಮಾವತ್ತೂರು ವೆಂಕಟಪ್ಪ, ಸಿದ್ದಲಿಂಗಪ್ಪ, ಮಹೇಶ್, ವೆಂಕಟೇಶ್, ಕವಿತಾ, ಮಂಜುಳಾ, ಲಕ್ಷಮ್ಮ, ರಜಾಕ್ ಸಾಬ್, ಗಣೇಶ್, ನಾಗರಾಜು, ಅರವಿಂದ್, ರಘುವೀರ್, ಮಂಜು, ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.