ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಭೌತಶಾಸ್ತ್ರ ವಿಭಾಗ ಪುನರಾರಂಭಕ್ಕೆ ಆಗ್ರಹ

Published 31 ಜನವರಿ 2024, 3:14 IST
Last Updated 31 ಜನವರಿ 2024, 3:14 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ಪದವಿ ವಿಭಾಗವನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ಸಂಘಟನೆಯ ನೇತೃತ್ವದ ನಿಯೋಗವು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

2007ರಲ್ಲಿ ಸರ್ಕಾರ ಭೌತಶಾಸ್ತ್ರ, ರಸಾಯನಶಾಸ್ತ್ರ, ಪರಿಸರ ವಿಜ್ಞಾನ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಮಂಜೂರು ಮಾಡಿದೆ. ನಿಗದಿತ ದಾಖಲಾತಿ ಇದ್ದರೂ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಭೌತಶಾಸ್ತ್ರ ವಿಭಾಗವನ್ನು ಮುಚ್ಚಲಾಗಿದೆ. ಅವೈಜ್ಞಾನಿಕ ಕಾರಣ ನೀಡಿ, ಅಪ್ರಜಾತಾಂತ್ರಿಕವಾಗಿ ನಡೆದುಕೊಂಡಿದ್ದಾರೆ ಎಂದು ಎಐಡಿಎಸ್‍ಒ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ ಅವರು ಮುಖ್ಯಮಂತ್ರಿ ಗಮನಕ್ಕೆ ತಂದರು.

‘ವಿ.ವಿ ಆಡಳಿತ ಮಂಡಳಿಯು ಭೌತಶಾಸ್ತ್ರ ವಿಭಾಗ ಸ್ಥಗಿತಗೊಳಿಸಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ ತಂದಿದೆ. ತಾಂತ್ರಿಕ ದೋಷ, ಶೈಕ್ಷಣಿಕ ಗುಣಮಟ್ಟ, ಹಣಕಾಸಿನ ಕೊರತೆ ಮತ್ತು ಎರಡು ಕಡೆ ಒಂದೇ ಕೋರ್ಸ್‌ ಇದ್ದರೆ ವಿದ್ಯಾರ್ಥಿಗಳಿಗೆ ಗೊಂದಲವಾಗುತ್ತದೆ. ಹೀಗಾಗಿ ವಿಭಾಗ ಮುಚ್ಚಲಾಗಿದೆ’ ಎಂದು ಕುಲಪತಿಯವರು ಅವೈಜ್ಞಾನಿಕ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳ ಪರವಾಗಿ ನಿಲ್ಲುವ ಬದಲು ವಿಭಾಗವನ್ನೇ ಮುಚ್ಚಿರುವುದು ವಿದ್ಯಾರ್ಥಿ ವಿರೋಧಿ. ಇದು ವಿ.ವಿ ವೈಫಲ್ಯ ತೋರಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಸೆಕ್ರೇಟರಿಯೇಟ್‌ ಸದಸ್ಯರಾದ ಭರತ್‌, ಪಲ್ಲವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT