ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ಪ್ರತ್ಯೇಕ ಮೀಸಲಾತಿಗೆ ಸವಿತಾ ಸಮಾಜ ಆಗ್ರಹ

Published 9 ನವೆಂಬರ್ 2023, 4:47 IST
Last Updated 9 ನವೆಂಬರ್ 2023, 4:47 IST
ಅಕ್ಷರ ಗಾತ್ರ

ಕೊರಟಗೆರೆ: ಸವಿತಾ ಸಮಾಜದ ಜಾತಿ ನಿಂದನೆ ತಡೆ ಕಾಯ್ದೆ ಮತ್ತು ಪ್ರತ್ಯೇಕ ಮೀಸಲಾತಿ ಜಾರಿಗೆ ಆಗ್ರಹಿಸಿ ಸಮುದಾಯದ ಮುಖಂಡರು ಪಟ್ಟಣದಲ್ಲಿ ಮಂಗಳವಾರ ತಹಶೀಲ್ದಾರ್‌ ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು.

ಸವಿತಾ ಸಮಾಜವು ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಇದರ ಜತೆಗೆ ಜಾತಿ ತಾರತಮ್ಯದಿಂದ ಸಮುದಾಯದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸವಿತಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಸ್.ಗಂಗರಾಜು ಹೇಳಿದರು.

ಸವಿತಾ ಸಮಾಜ ಮತ್ತು ಕ್ಷೌರಿಕ ವೃತ್ತಿಯನ್ನು ಸಿನಿಮಾ, ನಾಟಕಗಳಲ್ಲಿ ಆಡು ಭಾಷೆ ಮತ್ತು ಹಾಸ್ಯಗಳಲ್ಲಿ ನಿಂದಿಸಿ ನಮಗೆ ಅವಮಾನ ಮಾಡುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕ ಕಡಿವಾಣ ಹಾಕಬೇಕು. ಕಾಂಗ್ರೆಸ್‌ ಮುಖಂಡರು ಚುನಾವಣೆಗೂ ಮುನ್ನ ಈ ಬಾರಿ ಅಧಿಕಾರಕ್ಕೆ ಬಂದರೆ ಸವಿತಾ ಸಮಾಜಕ್ಕೆ ಜಾತಿ ನಿಂದನೆ ತಡೆ ಕಾಯ್ದೆ ಮತ್ತು ವಿಶೇಷ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಈಗ ನುಡಿದಂತೆ ನಡೆಯಬೇಕು ಎಂದು ಒತ್ತಾಯಿಸಿದರು.

ಕಾರ್ಯಾಧ್ಯಕ್ಷ ಗೌರಿಶಂಕರ್‌, ಪದಾಧಿಕಾರಿಗಳಾದ ರಾಘವೇಂದ್ರ, ರವಿಚಂದ್ರ, ಜಯರಾಂ, ರವಿಕುಮಾರ್, ನಟರಾಜು, ತ್ರಿಭುವನ್, ವೇಣು, ಉಮೇಶ್‌ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT