ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಈಚೆಗೆ ಕಾರ್ಖಾನೆಯ ಸಂಪ್ ಸ್ವಚ್ಛಗೊಳಿಸುವಾಗ ಮೃತಪಟ್ಟ ಪ್ರತಾಪ್ (25) ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಅನ್ಯಾಯವಾಗಿದ್ದು, ನ್ಯಾಯ ಒದಗಿಸುವಂತೆ ಮೃತರ ಪತ್ನಿ ಎಲ್.ಕಾವ್ಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಶಿರಾ ತಾಲ್ಲೂಕು ಮಾಗೋಡು ಗ್ರಾಮದ ಪ್ರತಾಪ್, ಮಧುಗಿರಿ ತಾಲ್ಲೂಕು ಬಡವನಹಳ್ಳಿಯ ಕಾವ್ಯಾ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದರು. ಇದಕ್ಕೆ ಪ್ರತಾಪ್ ಮನೆಯವರು ಒಪ್ಪಿರಲಿಲ್ಲ. ಮದುವೆ ನಂತರ ಇಬ್ಬರು ಬಡವನಹಳ್ಳಿಯಲ್ಲಿ ವಾಸವಿದ್ದರು. ಕೈಗಾರಿಕಾ ಪ್ರದೇಶದಲ್ಲಿ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದರು. ಮೇ 21ರಂದು ‘ಲಾರಸ್ ಬಯೋ’ ಎಂಬ ಕೈಗಾರಿಕೆಯಲ್ಲಿ ಸಂಭವಿಸಿದ ಅವಘಡದಲ್ಲಿ ಪ್ರತಾಪ್ ಉಸಿರುಗಟ್ಟಿ ಮೃತಪಟ್ಟಿದ್ದರು.

‘ಘಟನೆಯ ನಂತರ ಕೈಗಾರಿಕಾ ಸಂಸ್ಥೆಯಿಂದ ಪ್ರತಾಪ್ ತಂದೆ, ತಾಯಿಗೆ ₹25 ಲಕ್ಷದ ಪರಿಹಾರ ಚೆಕ್ ವಿತರಿಸಲಾಗಿದೆ. ಇದರಲ್ಲಿ ನನಗೆ ಯಾವುದೇ ಹಣ ಕೊಟ್ಟಿಲ್ಲ. ಮೂವರು ಮಕ್ಕಳಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಪತಿ ಮಾಡಿದ ಸಾಲ ತೀರಿಸಲು ಪರದಾಡುವಂತಾಗಿದೆ. ಪರಿಹಾರ ಕೊಡಿಸಬೇಕು’ ಕೋರಿದ್ದಾರೆ.

‘ಮಾಗೋಡಿನಲ್ಲಿ ನಡೆದ ಅಂತ್ಯಕ್ರಿಯೆಗೆ ಹೋಗಿದ್ದ ಸಮಯದಲ್ಲಿ ಗಂಡನ ಸಂಬಂಧಿಕರು ಗಲಾಟೆ ಮಾಡಿ ಅಲ್ಲಿಂದ ಕಳುಹಿಸಿದರು. ನಿನಗೆ ಪರಿಹಾರದ ಹಣ ಬೇಕಾದರೆ ₹50 ಸಾವಿರ ಕೊಡುತ್ತೇವೆ. ನಮ್ಮ ಸುದ್ದಿಗೆ ಬರಬೇಡ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.