ಮಂಗಳವಾರ, ಅಕ್ಟೋಬರ್ 20, 2020
26 °C

ಶಿರಾ: ಜಿಂಕೆ ಬೇಟೆಗಾರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಧಿತ ಆರೋಪಿಗಳೊಂದಿಗೆ ಪೊಲೀಸರು

ಪಟ್ಟನಾಯಕನಹಳ್ಳಿ: ಶಿರಾ ತಾಲ್ಲೂಕಿನ ಪೂಜಾರ್ ಮುದ್ದನಹಳ್ಳಿಯಲ್ಲಿ ಜಿಂಕೆ ಬೇಟೆಗೆ ಪ್ರಯತ್ನಿಸುತ್ತಿದ್ದ ಆರು ಜನರನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಬಂದೂಕು, 5 ಗುಂಡು, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ನವೀನ್, ಕಿರಣ್, ರಾಜೀವ್, ರಿಹಾನ್ ಶ್ರೀಧರ್, ಶುಜಾತ್ ಅವರು ಗುಬ್ಬಿ ಮತ್ತು ತುಮಕೂರಿನವರು.

ಡಿವೈಎಸ್‌ಪಿ ಕುಮಾರಪ್ಪ ಮತ್ತು ಶಿರಾ ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್‌ ಹನುಮಂತರಾಯ ಮಾರ್ಗದರ್ಶನದಲ್ಲಿ ಪಿಎಸ್ಐ ಧ್ರುವಚಾರ್, ಎಸ್ಎಂ ಕೃಷ್ಣ , ಹೆಡ್‌ಕಾನ್‌ಸ್ಟೆಬಲ್‌ ಶ್ರೀನಿವಾಸ್, ಕಾನ್‌ಸ್ಟೆಬಲ್‌ ಜಗದೀಶ್ ಹನುಮಂತಾಚಾರ್, ನಾಗರಾಜು, ಯತೀಶ್, ರೇವಣ್ಣ ಸುನೀಲ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.