ಶನಿವಾರ, ಮಾರ್ಚ್ 28, 2020
19 °C

ದೇವರಾಯನದುರ್ಗದಲ್ಲಿ ಬೆಂಕಿ: ಬಾಡಿದ ಗಿಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ದೇವರಾಯನದುರ್ಗದಲ್ಲಿನ ಭೋಗ ನರಸಿಂಹಸ್ವಾಮಿ ದೇವಸ್ಥಾನದ ಬಲಭಾಗದ ಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು.

ಬೆಟ್ಟದಲ್ಲಿ ಬೆಳೆದಿದ್ದ ಹುಲ್ಲು ಈಗ ಒಣಗಿದೆ. ಹಾಗಾಗಿ ಬೆಂಕಿಜ್ವಾಲೆ ತ್ವರಿತವಾಗಿ ಹಬ್ಬುತ್ತಿತ್ತು. ಬಂಡೆಗಳಿಂದಾಗಿ ಬೆಂಕಿ ಹೆಚ್ಚಿನ ಪ್ರದೇಶಗಳಿಗೆ ಹರಡಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಬೆಂಕಿಯ ಧಗೆಗೆ 1 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿನ ಹುಲ್ಲು ಸುಟ್ಟಿದೆ. ಗಿಡಗಳಿಗೂ ತಾಪ ತಗಲಿದ್ದರಿಂದ ಅವುಗಳೂ ಬಾಡಿದಂತಾಗಿವೆ.

ಬಿಸಿಲಿನ ಜಳ ನಿತ್ಯ ಹೆಚ್ಚುತ್ತಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದಲ್ಲಿನ ಕಾಣಿಸಿಕೊಳ್ಳುವ ಬೆಂಕಿಯತ್ತ ಕಣ್ಣಿಟ್ಟಿರಬೇಕು. ಆ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)