ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನೇನಹಳ್ಳಿ ಕೆರೆಗೆ ನೀರು ಹಂಚಿಕೆ ಮಾಡಿ: ಶಾಸಕ ಮಸಾಲ ಜಯರಾಂ ಒತ್ತಾಯ

Last Updated 17 ಆಗಸ್ಟ್ 2020, 17:41 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಕ್ಷೇತ್ರ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯಡಿ ನಿರ್ಮಾಣ ಆಗುತ್ತಿರುವ ಕಾಮಗಾರಿಯನ್ನು ಶಾಸಕ ಮಸಾಲ ಜಯರಾಂ ವೀಕ್ಷಿಸಿದರು.

ದಂಡಿನಶಿವರ ಹೋಬಳಿ ಹೋನ್ನೆನಹಳ್ಳಿ ಹಾಗೂ ಹಡವನಹಳ್ಳಿ ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ವಿವಿಧ ಸಮಸ್ಯೆಗಳ ಕುರಿತು ಶಾಸಕರಲ್ಲಿ ಹೇಳಿಕೊಂಡರು.

ಆಗ ಸ್ಥಳದಲ್ಲಿದ್ದ ಎತ್ತಿನ ಹೊಳೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಅವರಿಗೆ, ಎತ್ತಿನ ಹೊಳೆ ಯೋಜನೆಗಾಗಿ ನೂರಾರು ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡಬೇಕು ಎಂದು ಸೂಚಿಸಿದರು.

‘ಹಲವು ದಿನಗಳಿಂದ ಇಲಾಖೆ ಮತ್ತು ಅಧಿಕಾರಿಗಳ ಬಳಿ ಅಲೆದರೂ ಇದುವರೆಗೂ ಪರಿಹಾರ ಬಂದಿಲ್ಲ. ಈ ಯೋಜನೆಗಾಗಿ ಗ್ರಾಮದ ರೈತರು 52.28 ಎಕರೆ ಭೂಮಿ ನೀಡಿದ್ದರೂ ಹಡವನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಹಾಗೂ ಹೊನ್ನೇನಹಳ್ಳಿ ಕೆರೆಗೆ ನೀರಿನ ಹಂಚಿಕೆಯ ಪ್ರಸ್ತಾಪವನ್ನು ಕೈ ಬಿಟ್ಟಿರುವುದು ಸರಿಯಲ್ಲ. ಈ ಕೆರೆಗೆ 20 ಎಂಸಿಎಫ್‌ಟಿ ನೀರು ಹಂಚಿಕೆ ಮಾಡಲು ಕಾರ್ಯಯೋಜನೆ ರೂಪಿಸಬೇಕು. ಹಾಗೂ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕಾಮಗಾರಿ ನಡೆಯಲು ಬಿಡುವುದಿಲ್ಲ’ ಎಂದು ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.

ಎತ್ತಿನಹೊಳೆ ಸಹಾಯಕ ಎಂಜಿನಿಯರ್ ಸುರೇಶ್, ಮುಖಂಡ ಹೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT