ತುಮಕೂರು: ‘ಮುಂದಿನ ತಿಂಗಳು ಮಗನ ಹುಟ್ಟುಹಬ್ಬ ಇತ್ತು. ಅವನಿಗಾಗಿ ಹೊಸ ಬೈಕ್ ಬುಕ್ ಮಾಡಿದ್ದೆ, ಇದ್ದ ಒಬ್ಬ ಮಗನೂ ನಮ್ಮನ್ನು ಅಗಲಿದ್ದಾನೆ’ ...

ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿದಲ್ಲಿ ಮೃತಪಟ್ಟ ಮನೋಜ್ಕುಮಾರ್ ತಂದೆ ದೇವರಾಜು ಹೀಗೆ ಮಾತನಾಡುತ್ತಲೇ ಮಗನನ್ನು ನೆನೆದು ಕಣ್ಣೀರು ಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ₹25 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ದೇವರಾಜು ಮಗನ ನೆನಪಲ್ಲಿ ಕಂಬನಿ ಮಿಡಿದರು.

ಕುಣಿಗಲ್ ತಾಲ್ಲೂಕಿನ ನಾಗಸಂದ್ರದ ದೇವರಾಜು ತಳ್ಳುವ ಗಾಡಿಯಲ್ಲಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದರು. ತಮ್ಮ ಕಷ್ಟಗಳ ಮಧ್ಯೆ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಮನೋಜ್ ಬೆಂಗಳೂರಿನಲ್ಲಿ ಬಿಬಿಎಂ ಕೋರ್ಸ್ ಓದುತ್ತಿದ್ದರು.

‘ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಜೀವನಕ್ಕೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡವರ ಸ್ಥಿತಿ ಏನಾಗಬೇಡ. ಎಷ್ಟೇ ಹಣ ಕೊಟ್ಟರೂ ಮಗ ವಾಪಸ್ ಬರಲ್ಲ. ನಮ್ಮ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾನೆ ಎಂಬ ಆಸೆ ಇತ್ತು. ಅವನು ದುಡಿಯದಿದ್ದರೂ ಪರವಾಗಿಲ್ಲ, ಕಣ್ಣ ಮುಂದೆ ಇದ್ದಿದ್ದರೆ ಸಾಕಿತ್ತು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಕುಣಿಗಲ್ ತಹಶೀಲ್ದಾರ್ ರಶ್ಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.