ಶಿರಾ: ತಾಲ್ಲೂಕಿನಲ್ಲಿರುವ 6,200 ಮಂದಿ ಅಂಗವಿಕಲರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಅವರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುವ ಯೋಜನೆ ರೂಪಿಸುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ನಡೆದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕರಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರ, ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

‘ಯಾವುದೇ ಕಾರಣಕ್ಕೂ ಅಂಗವಿಕಲರನ್ನು ಕೈಬಿಡುವ ಪ್ರಶ್ನೆ ಇಲ್ಲ, ಸರ್ಕಾರ ನಿಮ್ಮ ಪರವಾಗಿದೆ ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಯಾವುದೇ ಸಮಸ್ಯೆಯಿದ್ದರು ನೇರವಾಗಿ ನನಗೆ ಕರೆ ಮಾಡಿ’ ಎಂದರು.

ದೆಹಲಿಯಲ್ಲಿರುವ ಅಂಗವಿಕಲರ ಸಂಸ್ಥೆಯ ಜೊತೆ ಸೇರಿ ಅಂಗವಿಕಲರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಲಾಗುವುದು. ಈಗ ಮೊದಲ ಹಂತವಾಗಿ 87 ಮಂದಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರ ನೀಡುತ್ತಿದ್ದು ಇದರ ಸಾಧಕ ಬಾದಕಗಳನ್ನು ನೋಡಿಕೊಂಡು ಮುಂದಿನ ತಿಂಗಳು ಇನ್ನು 100 ಮಂದಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರ ನೀಡಲಾಗುವುದು ಎಂದರು.

ತಾ.ಪಂ ಇಒ ಆರ್.ಹರೀಶ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾಖಾನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಎಂಆರ್ ಡಬ್ಲೂ ಚಿತ್ತಪ್ಪ, ಅಂಗವಿಕಲರ ಸಂಘದ ಅಧ್ಯಕ್ಷ ಕಂಬಣ್ಣ, ತಾ.ಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ಫರ್ಮಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.