ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ದಸರಾ: ಅ.3 ರಂದು ಶಕ್ತಿ ದೇವತೆ ಪ್ರತಿಷ್ಠಾಪನೆ

Published : 25 ಸೆಪ್ಟೆಂಬರ್ 2024, 5:22 IST
Last Updated : 25 ಸೆಪ್ಟೆಂಬರ್ 2024, 5:22 IST
ಫಾಲೋ ಮಾಡಿ
Comments

ತುಮಕೂರು: ದಸರಾ ಆಚರಣೆಗೆ ಜಿಲ್ಲಾ ಆಡಳಿತ ಸಜ್ಜಾಗಿದ್ದು, ಅ. 3ರಂದು ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶಕ್ತಿ ದೇವತೆ ಪ್ರತಿಷ್ಠಾಪಿಸಿ ನಾಡ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.

‘ಧಾರ್ಮಿಕ ವಿಧಿ ವಿಧಾನದ ಮೂಲಕ ಶಕ್ತಿ ದೇವಿಯನ್ನು ಪ್ರತಿಷ್ಠಾಪಿಸಬೇಕು. ಪ್ರತಿದಿನ ವಿಶೇಷ ಅಲಂಕಾರದಿಂದ ಸಿಂಗರಿಸಬೇಕು. ಹೋಮ, ಹವನ ನಡೆಸಬೇಕು. ಗಣಪತಿ ಪೂಜೆ, ಧ್ವಜ ಪೂಜೆ, ಮಂಟಪ ಪೂಜೆ, ಧ್ವಜಾರೋಹಣ, ಗಣಪತಿ ಹೋಮ, ದುರ್ಗಾ ಹೋಮ ಇತರೆ ಪೂಜಾ ಕೈಂಕರ್ಯ ನೆರವೇರಿಸಬೇಕು’ ಎಂದು ವಿವಿಧ ದೇವಾಲಯಗಳ ಅರ್ಚಕರು ಸಲಹೆ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ದಸರಾ ಉತ್ಸವ ಆಚರಣೆ ಸಂಬಂಧ ನಡೆದ ಸಭೆಯಲ್ಲಿ ತಮ್ಮ ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ‘ದಸರಾ ಉತ್ಸವದಲ್ಲಿ ಎಲ್ಲ ದೇವಾಲಯದ ಮುಖ್ಯಸ್ಥರು, ಅರ್ಚಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಅ. 10ರಂದು ದುರ್ಗಾಷ್ಟಮಿ, ಅ. 11ರಂದು ಮಹಾನವಮಿ ಪೂಜೆ, ಅ. 12ರ ವಿಜಯದಶಮಿ ದಿನ ಶಮೀಪೂಜೆ ಹಾಗೂ ಬನ್ನಿಮರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುರಾತನ ಪರಂಪರೆ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಮುಜರಾಯಿ ತಹಶೀಲ್ದಾರ್‌ ಸವಿತಾ, ಅರ್ಚಕರ ಸಂಘದ ಅಧ್ಯಕ್ಷ ರಾಮತೀರ್ಥನ್, ಉಪವಿಭಾಗಾಧಿಕಾರಿಗಳಾದ ಗೌರವ್‌ಕುಮಾರ್ ಶೆಟ್ಟಿ, ಗೋಟೂರು ಶಿವಪ್ಪ, ತಹಶೀಲ್ದಾರರಾದ ರಾಜೇಶ್ವರಿ, ವರದರಾಜ್, ಶಿರೀನ್‌ತಾಜ್‌ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT