ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ

Last Updated 4 ಸೆಪ್ಟೆಂಬರ್ 2021, 3:59 IST
ಅಕ್ಷರ ಗಾತ್ರ

ತುಮಕೂರು: ದಕ್ಷಿಣ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗ ಸೇರಿದಂತೆ ಒಟ್ಟು 18 ಶಿಕ್ಷಕರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲೆ ವಿಭಾಗ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ 6 ಮಂದಿ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರಸಿಡ್ಲಹಳ್ಳಿ ಶಾಲೆ ಪಿ.ನರಸಿಂಹಮೂರ್ತಿ, ಗುಬ್ಬಿ ತಾಲ್ಲೂಕು ಬಿ.ಕೋಡಿಹಳ್ಳಿ ಶಾಲೆ ರಂಗಸ್ವಾಮಿ, ಕುಣಿಗಲ್ ತಾಲ್ಲೂಕು ಗೊಲ್ಲರಹಟ್ಟಿ (ಎನ್.ಎಂ.ಪುರ) ಶಾಲೆ ಎಂ.ಸಿ.ಲೀಲಾವತಿ, ತಿಪಟೂರು ತಾಲ್ಲೂಕು ಯಗಚಿಕಟ್ಟೆ ಶಾಲೆ ಎಸ್.ಯು.ಶೈಲಾ, ತುಮಕೂರು ತಾಲ್ಲೂಕು ಸಂಗ್ಲಾಪುರ ಶಾಲೆ ಶ್ರೀರಂಗಮೂರ್ತಿ, ತುರುವೇಕೆರೆ ತಾಲ್ಲೂಕು ನೇರಲೇಕೆರೆ ಗೊಲ್ಲರಹಟ್ಟಿ ಶಾಲೆಯ ಡಿ.ಪಿ.ಶ್ರೀನಿವಾಸ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ 5 ಮಂದಿ ಶಿಕ್ಷಕರು ಆಯ್ಕೆ ಆಗಿದ್ದಾರೆ. ಚಿಕ್ಕನಾಯಕನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಎಸ್.ಯೋಗೀಶ್ ಕುಮಾರ್, ಗುಬ್ಬಿ ತಾಲ್ಲೂಕು ಮಾದಾಪುರ ಶಾಲೆ ರವೀಶ, ಕುಣಿಗಲ್ ತಾಲ್ಲೂಕು ಜಿಕೆಬಿಎಂಎಸ್ ಶಾಲೆ ಎಚ್.ಎನ್.ರಾಜಣ್ಣ, ತಿಪಟೂರು ತಾಲ್ಲೂಕು ತಿಮ್ಲಾಪುರ ಶಾಲೆ ಕೆ.ಎನ್.ನಾಗರಾಜು, ತುಮಕೂರು ತಾಲ್ಲೂಕು ಬಡ್ಡಿಹಳ್ಳಿ ಶಾಲೆ ವೆಂಕಟಪ್ಪ, ತುರುವೇಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕಿ ಎಚ್.ಎನ್.ಸಾವಿತ್ರಮ್ಮ.

ಪ್ರೌಢಶಾಲೆ: ಪ್ರೌಢಶಾಲಾ ವಿಭಾಗದಲ್ಲಿ 4 ಮಂದಿ ಶಿಕ್ಷಕರು, ತಲಾ ಒಬ್ಬರು ಚಿತ್ರಕಲಾ, ದೈಹಿಕ ಶಿಕ್ಷಣ ಶಿಕ್ಷಕ ಸೇರಿದಂತೆ 6 ಮಂದಿ ಆಯ್ಕೆಯಾಗಿದ್ದಾರೆ. ಚಿಕ್ಕ
ನಾಯಕನಹಳ್ಳಿ ತಾಲ್ಲೂಕು ಬರಗೂರು ಶಾಲೆ ಕೆ.ಪಿ.ಜಯದೇವಮೂರ್ತಿ, ಗುಬ್ಬಿ ತಾಲ್ಲೂಕು ಚೇಳೂರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ರಂಗಸ್ವಾಮಯ್ಯ, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹುಲಿಯೂರಮ್ಮ ಅನುದಾನಿತ ಪ್ರೌಢಶಾಲೆ ಎನ್.ಟಿ.ಪ್ರಸಾದ್ ಕುಮಾರ್, ತಿಪಟೂರು ತಾಲ್ಲೂಕು ರಂಗಾಪುರ, ಎಸ್‌ಪಿಎಸ್ ಸಂಯುಕ್ತ ಪದವಿಪೂರ್ವ (ಪ್ರೌಢಶಾಲಾ ವಿಭಾಗ) ಕಾಲೇಜಿನ ಎಚ್.ಡಿ.ದೇವರಾಜು, ತುಮಕೂರು ಎಂಪ್ರೆಸ್ ಪಬ್ಲಿಕ್ ಶಾಲೆಯ ರಾಮಯ್ಯ, ತುರುವೇಕೆರೆ ತಾಲ್ಲೂಕು ದೊಡ್ಡಗೊರಾಘಟ್ಟ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎನ್.ಆರ್.ಷಣ್ಮುಖ ಅವರು ಆಯ್ಕೆ ಆಗಿದ್ದಾರೆ.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT