ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಂಧನ ದುರದೃಷ್ಟಕರ: ಡಾ.ಜಿ.ಪರಮೇಶ್ವರ

Last Updated 4 ಸೆಪ್ಟೆಂಬರ್ 2019, 9:56 IST
ಅಕ್ಷರ ಗಾತ್ರ

ತುಮಕೂರು: ಶಾಸಕ ಡಿ.ಕೆ.ಶಿವಕುಮಾರ ಬಂಧನ ದುರದೃಷ್ಟಕರವಾಗಿದ್ಸು, ಬಿಜೆಪಿ ಸೇಡಿನ ರಾಜಕಾರಣದಿಂದ ಈ ಕೃತ್ಯ ನಡೆಸಿದೆ ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ಚರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,' ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬಹಳ ದಿನಗಳಿಂದ ಡಿ.ಕೆ.ಶಿವಕುಮಾರ್ ಅವರಿಗೆ ತೊಂದರೆ ನೀಡಿದೆ. ಅನೇಕ ಬಾರಿ ಇದನ್ನು ನಾವು ಮೊದಲೇ ಹೇಳಿದ್ದೇವೆ ಎಂದರು.

ತಪ್ಪು ಮಾಡಿದ್ದರೆ ಬಂಧಿಸಲಿ. ಅವರಿಗೆ ಎಷ್ಟೇ ತೊಂದರೆ ಮಾಡಿದರೂ ಶಿವಕುಮಾರ್ ಅವರು ತನಿಖೆಗೆ ಸಹಕರಿಸಿಕೊಂಡು ಬಂದಿದ್ದಾರೆ. ಕಾನೂನಿಗೆ ಗೌರವ ಕೊಡುವವರು. ಬಿಜೆಪಿ ಸೇಡಿನ ರಾಜಕಾರಣ ಹೇಗೆ ಮಾಡುತ್ತಿದೆ ಎಂಬುದಕ್ಕೆ ಕೇಂದ್ರ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ನಡೆಸಿಕೊಂಡ ರೀತಿ ಕಣ್ಮುಂದೆ ಇದೆ ಎಂದು ಆರೋಪಿಸಿದರು.

ಶಿವಕುಮಾರ್ ಅವರಿಗೆ ರಕ್ತದೊತ್ತಡ, ಮಧುಮೇಹ ಇದೆ ಎಂಬುದು ನನಗೆ ಗೊತ್ತು. ತನಿಖೆಗೆ ಸಹಕರಿಸಿದರೂ ಬಂಧನ ಮಾಡಿದರೆ ಎಂಥವರಿದ್ದರೂ ಆರೋಗ್ಯದಲ್ಲಿ ಏರುಪೇರಾಗಿತ್ತದೆ.ಅವರು ಚಿಕಿತ್ಸೆ ಪಡೆಯಲು ಇಡಿ ಅಧಿಕಾರಿಗಳು ಸಹಕರಿಸಬೇಕು ಎಂದು ಒತ್ತಾಯ ಮಾಡಿದರು.

ಕಾನೂನಿನ ಇತಿಮಿತಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT