ಮಧುಗಿರಿ: ರಸ್ತೆಯ ಗುಂಡಿ ಮುಚ್ಚಿದ ಶಿಕ್ಷಕ ದಂಪತಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಮಧ್ಯದ ದೊಡ್ಡ ಗುಂಡಿಯನ್ನು ಮುಚ್ಚಿದ ಶಿಕ್ಷಕ ದಂಪತಿ

ತಾಲ್ಲೂಕು ಪುರವರ ಗ್ರಾಮದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಗುಂಡಿಯಲ್ಲಿ ವಾಹನ ಸವಾರರು ಬಿದ್ದು ನೋವು ಸಂಭವಿಸಿದ್ದವು. ಈ ವಿಷಯ ತಿಳಿದ ಶಿಕ್ಷಕ ಫಣೀಂದ್ರನಾಥ, ಪತ್ನಿ ಪಿ.ಜಿ.ಇಂದ್ರಮ್ಮ, ಸಿರಿ ಮತ್ತು ಕಲ್ಯಾಣ್ ಶನಿವಾರ ಶಾಲೆ ಮುಗಿಸಿಕೊಂಡು ಜಲ್ಲಿ ಮತ್ತು ಮಣ್ಣಿನಿಂದ ಗುಂಡಿಯನ್ನು ಮುಚ್ಚಿದ್ದರು.

ಈ ಬಗ್ಗೆ ಪ್ರಜಾವಾಣಿ ವೆಬ್ಸೈಟ್ನಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ಸುರೇಶ್ ಕುಮಾರ್, ಶಿಕ್ಷಕ ದಂಪತಿಗೆ ದೂರವಾಣಿ ಕರೆ ಮಾಡಿ, ‘ಇಲಾಖೆ ಕಾರ್ಯ ತುಂಬಾ ಬೇಸರ ತಂದಿದೆ. ರಸ್ತೆಯ ಗುಂಡಿ ಮುಚ್ಚಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

ದಂಪತಿಗೆ ಅಭಿನಂದನೆ ಸಲ್ಲಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋಮವಾರ ಡಿಡಿಪಿಐ ರೇವಣ್ಣಸಿದ್ದಪ್ಪ ಶಿಕ್ಷಕ ದಂಪತಿಯನ್ನು ಸನ್ಮಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.