ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಮಳೆ, ವಿಶ್ವಶಾಂತಿಗಾಗಿ ಪ್ರಾರ್ಥನೆ

Published 12 ಏಪ್ರಿಲ್ 2024, 5:17 IST
Last Updated 12 ಏಪ್ರಿಲ್ 2024, 5:17 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಿದರು.

ಪಟ್ಟಣದ ರೊಪ್ಪ, ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಮಸೀದ್ ಇ ಆಜಂ ಮೂಲಕ ಈದ್ಗಾ ಮೈದಾನಕ್ಕೆ ಸೇರಲಾಯಿತು. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಜರತ್ ಫಾರಿದ್ ಮಾತನಾಡಿ, ಪ್ರತಿಯೊಬ್ಬರು ಪ್ರೀತಿ ಸೌಹಾರ್ದದಿಂದ ಜೀವಿಸಬೇಕು. ಶಾಂತಿ ನೆಮ್ಮದಿ, ಪರಸ್ಪರ ಸ್ನೇಹದಿಂದ ಬದುಕಬೇಕು. ಮಳೆ- ಬೆಳೆ ಇಲ್ಲದೆ ಬರ ಆವರಿಸಿದ್ದು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದಾಗಿದೆ. ಶೀಘ್ರ ಮಳೆಯಾಗಲಿ, ನಾಡಿನಲ್ಲಿ ಶಾಂತಿ ನೆಮ್ಮದಿ ನೆಲಸಲಿ ಎಂದು ತಿಳಿಸಿದರು.

ಒಂದು ತಿಂಗಳ ಉಪವಾಸವಿದ್ದು ನಿಷ್ಠೆಯಿಂದ ರೋಜ ಆಚರಿಸಿದರೆ ದೇಹದ ಜೊತೆಗೆ ಮನಸ್ಸು ಸಹ ಸದೃಢಗೊಳ್ಳತ್ತದೆ ಎಂದು ತಿಳಿಸಿದರು.

ಇಮಾಮ್ ಹಜರತ್, ಮುಬಾರಕ್, ಇಮಾಮ್ ಪಾರಿದ್, ಸುಬಾನ್‌ ಸಾಬ್‌, ಯುನುಸ್, ಇದಾಯತ್, ಷಾಕೀರ್, ಮುಬಾಷಿರ್, ತಮೀಜ್, ಎಂ ಎ ಜಿ ಇಮ್ರಾನ್‌, ಲತೀಫ್‌ ಸಾಬ್‌, ಆರ್‌.ಕೆ. ನಿಸಾರ್‌, ಆರ್‌.ಟಿ. ಖಾನ್‌, ಬಾಬು, ಪಿಟೀಲ್‌, ಖಲೀಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT