ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಸೇರಿರುವ ರಾಸುಗಳು
ಆಸಕ್ತಿ ಕಡಿಮೆ ಕೃಷಿ ಕಾರ್ಯದಲ್ಲಿ ಜಾನುವಾರು ಬಳಕೆ ಕಡಿಮೆಯಾದಂತೆ ರಾಸುಗಳ ಖರೀದಿಯೂ ಕುಸಿತವಾಗುತ್ತಿದೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಬಳಸುತ್ತಿದ್ದಾರೆ. ದನಗಳನ್ನು ಕಟ್ಟಿ ಆರೈಕೆ ಮಾಡಲು ಹೆಚ್ಚಿನ ಜನರು ಆಸಕ್ತಿ ತೋರುತ್ತಿಲ್ಲ.
– ಕುಮಾರ್ ಆದಿಚುಂಚನಗಿರಿ
ವ್ಯಾಪಾರ ಕುಸಿತ ಜಾತ್ರೆಗೆ ಬಂದ ಎಲ್ಲ ರಾಸುಗಳು ಮಾರಾಟ ಆಗಲ್ಲ. ಸಿದ್ಧಗಂಗಾ ಜಾತ್ರೆಯಲ್ಲಿ ಈ ಬಾರಿ ವ್ಯಾಪಾರ– ವಹಿವಾಟು ಕುಸಿತ ಕಂಡಿದೆ. ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಜಾನುವಾರುಗಳು ಸೇರಿವೆ. ಉತ್ಸಾಹದಿಂದಲೇ ದನಗಳನ್ನು ತಂದಿದ್ದ ವ್ಯಾಪಾರಸ್ಥರು ರೈತರು ವ್ಯಾಪಾರ– ವಹಿವಾಟು ನಡೆಯದೆ ನಿರಾಸೆಯಿಂದ ವಾಪಸ್ ಹೋಗುವಂತಾಗಿದೆ.