ಸೋಮವಾರ, ಸೆಪ್ಟೆಂಬರ್ 27, 2021
22 °C

ತೋವಿನಕೆರೆ: ವಿದ್ಯಾನಿಧಿ ಕಾರ್ಯಕ್ರಮ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋವಿನಕೆರೆ: ರೈತರಿಂದ ತುಂಬಿರುತ್ತಿದ್ದ ರೈತ ಸಂಪರ್ಕ ಕೇಂದ್ರ ಭಾನುವಾರ ವಿದ್ಯಾರ್ಥಿಗಳಿಂದ ತುಂಬಿತ್ತು. ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಿಂದ ನೇರವಾಗಿ ಪ್ರಸಾರ ಮಾಡಿದ್ದ ರೈತ ವಿದ್ಯಾನಿಧಿ ಯೋಜನೆಯ ಲೋಕಾರ್ಪಣೆ ವೀಕ್ಷಿಸಲು ಆಗಮಿಸಿದ್ದರು.

ಕೆಲವು ವಿದ್ಯಾರ್ಥಿಗಳು ಸ್ವಲ್ಪ ಸಮಯ ಕುಳಿತು ವೀಕ್ಷಿಸಿದರು. ಹೆಚ್ಚಿನವರು ಬಂದು ಹೋಗುವ ಕೆಲಸ ಮಾಡಿದರು. ಮತ್ತೆ ಕೆಲವರು ಕೇಂದ್ರ ಸಚಿವರ ಹಿಂದಿ ಭಾಷಣ ಪ್ರಾರಂಭವಾದ ಕೂಡಲೇ ಅರ್ಥವಾಗದೆ ಜಾಗ ಖಾಲಿ ಮಾಡಿದರು. ಇಲಾಖೆಯವರು ಮನವಿ ಮಾಡಿದರೂ ಅರ್ಥವಾಗುವುದಿಲ್ಲ ಎಂದು ಕಾರಣ ಹೇಳಿದರು.

ಕೃಷಿ ಅಧಿಕಾರಿ ನರಸಿಂಹಮೂರ್ತಿ, ಅಭಿಲಾಷ ಮತ್ತು ಹನುಮಂತರಾಯಪ್ಪ ವ್ಯವಸ್ಥಿತವಾಗಿ ಕಾರ್ಯಕ್ರಮ ಏರ್ಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು