ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ಅಡಿಕೆ, ತೆಂಗಿನ ತೋಟಕ್ಕೆ ಬೆಂಕಿ

Published 18 ಮಾರ್ಚ್ 2024, 6:03 IST
Last Updated 18 ಮಾರ್ಚ್ 2024, 6:03 IST
ಅಕ್ಷರ ಗಾತ್ರ

ತೋವಿನಕೆರೆ: ಇಲ್ಲಿಗೆ ಸಮೀಪದ ಜುಂಜರಾಮನಹಳ್ಳಿಯಲ್ಲಿ ರೈತರೊಬ್ಬರ  ತೋಟಕ್ಕೆ ಭಾನುವಾರ ಬೆಂಕಿ ಬಿದ್ದು  ಸುಮಾರೂ ಮೂರು ಎಕರೆಯಷ್ಟು ತೆಂಗು ಮತ್ತು ಅಡಿಕೆ ಮರಗಳು ನಾಶವಾಗಿವೆ. 

ಸಮೀಪದ ಕುರಂಕೋಟೆ ಪಂಚಾಯತಿ ವ್ಯಾಪ್ತಿಯ ಜುಂಜರಾಮನಹಳ್ಳಿಯ ಪ್ರಗತಿ ಪರ ಕೃಷಿಕ ಜನಾರ್ದನಯ್ಯ ಅವರ ತೋಟದಲ್ಲಿ ಬೆಂಕಿ ಬಿದ್ದಿದೆ. ಅವರು ಸಾವಯವ ಕೃಷಿಯ ಮೂಲಕ ಸಮೃದ್ಧ ಮಿಶ್ರ ಕೃಷಿ ತೋಟ ಮಾಡಿ ವಿವಿಧ ರೀತಿಯ ವಾರ್ಷಿಕ ಬೆಳೆಗಳನ್ನು ಬೆಳೆದಿದ್ದರು.

ಭಾನುವಾರ ಮಧ್ಯಾಹ್ನ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ರಖರವಾದ ಬಿಸಿಲು ಮತ್ತು ಗಾಳಿ ಜೋರಾಗಿ ಬೀಸುತ್ತಿದ್ದರಿಂದ ಬೆಂಕಿಯ ಜ್ವಾಲೆ ತೀವ್ರವಾಗಿ ತೋಟದಲ್ಲಿ ಹರಡಿಕೊಂಡಿತು. ಸುಮಾರು ಮೂರು ಎಕರೆಯಲ್ಲಿ 200ಕ್ಕೂ ಹೆಚ್ಚು ತೆಂಗು 150 ಅಡಿಕೆ ಗಿಡಗಳು ಹಣ್ಣಿನ ಗಿಡಗಳು ಸೇರಿದಂತೆ ಬೇರೆ ಬೇರೆ ಗಿಡಗಳು ಸಂಪೂರ್ಣವಾಗಿ ಬೆಂಕಿಯಿಂದ ಸುಟ್ಟು ಹೋಗಿದೆ.

 ಸ್ಥಳಕ್ಕೆ ಧಾವಿಸಿದ್ದ ಕೊರಟಗೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಬೆಂಕಿ‌‌‌‌‌ ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT