ಶುಕ್ರವಾರ, ಅಕ್ಟೋಬರ್ 22, 2021
25 °C

ಕುಣಿಗಲ್: ನಾಲ್ವರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಕುಗ್ರಾಮ ಮೆಣಸಕೆರೆ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮೆಣಸಕೆರೆದೊಡ್ಡಿ 50 ಕುಟುಂಬಗಳಿರುವ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿದೆ. ವಿದ್ಯಾರ್ಥಿಗಳಾದ ಎಂ.ಎಸ್. ವರ್ಷಿತಾ, ಎಚ್.ಎಲ್. ಪರಿಣಿತಾ, ಎಚ್.ಎಸ್. ಶಶಾಂಕ್ ಮತ್ತು ವಿದ್ಯಾ ಎಂ. ಆಗಸ್ಟ್‌ನಲ್ಲಿ ನಡೆದ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಆಯ್ಕೆಗೆ ಶ್ರಮಿಸಿದ ಶಿಕ್ಷಕರಾದ ಎಚ್.ಜಿ. ಸೀನಯ್ಯ ಮತ್ತು ಶಿವಲಿಂಗಯ್ಯ ಅವರಿಗೆ ಗ್ರಾಮಸ್ಥರು ಅಭಿನಂದನೆ
ಸಲ್ಲಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು