ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ವಿಚಾರಧಾರೆ ದೇಶದ ಭದ್ರತೆ ಬುನಾದಿ: ಪ್ರೊ. ಮಲನಮೂರ್ತಿ

Published 2 ಅಕ್ಟೋಬರ್ 2023, 13:17 IST
Last Updated 2 ಅಕ್ಟೋಬರ್ 2023, 13:17 IST
ಅಕ್ಷರ ಗಾತ್ರ

ಮಧುಗಿರಿ: ಗಾಂಧಿ ವಿಚಾರಧಾರೆ ದೇಶದ ಭದ್ರತೆ ಬುನಾದಿ ಎಂದು ಸಾಹಿತಿ ಪ್ರೊ. ಮಲನಮೂರ್ತಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧಿಜೀ ವಿಚಾರ ಧಾರೆ ಗಾಳಿ–ಬೆಳಕಿನಲ್ಲಿ ಬೆರೆತುಕೊಂಡಿದೆ. ಪ್ರಸ್ತುತ ವಿದ್ಯಮಾನಗಳು ಗಾಂಧಿ ಅವರನ್ನು ನೋಟು ನಾಣ್ಯದ ಮೇಲೆ ಮುದ್ರಿಸಿ ನಾವು ಆರಾಮಾಗಿ ನಿದ್ರಿಸುತ್ತಿದ್ದೇವೆ. ರಸ್ತೆಗಳಲ್ಲಿ ಗಾಂಧಿ ಪ್ರತಿಮೆ ನಿಲ್ಲಿಸಿದ್ದೇವೆ. ಆಚರಣೆಯಲ್ಲಿ ಅವರ ವಿಚಾರ ಧಾರೆ ನಿಲ್ಲಿಸಿದ್ದೇವೆ ಎಂದರು.

ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತ ಅಧಿಕಾರಿ ರಿಷಿ ಆನಂದ್, ಪುರಸಭೆ ಸದಸ್ಯರಾದ ಎಂ.ಆರ್ ಜಗನ್ನಾಥ್ ,ಕೆ ನಾರಾಯಣ್ ಅಲೀಂ, ಮುಖ್ಯಾಧಿಕಾರಿ ನಜ್ಮಾ, ಕಚೇರಿ ವ್ಯವಸ್ಥಾಪಕ ಗುರುಪ್ರಸಾದ್, ಕಂದಾಯ ಅಧಿಕಾರಿ ವಸಂತಕುಮಾರಿ ,ಸಮುದಾಯ ಸಂಘಟಕಿ ಬಿ.ಆರ್.ವರಲಕ್ಷ್ಮಿ , ಜೆಇ ಸಂಜೀವ್ ಮೂರ್ತಿ ,ಆರೋಗ್ಯ ಶಾಖೆ ಸುರೇಶ್ ಇದ್ದರು.

ಎಂಜಿಎಂ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿಗಳು ಭಗವದ್ಗೀತೆ , ಕುರಾನ್ ಮತ್ತು ಬೈಬಲ್‌ ಪಠಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT