ಸೋಮವಾರ, ಸೆಪ್ಟೆಂಬರ್ 28, 2020
20 °C
ರೈತರಿಗೆ ಐಐಎಚ್ಆರ್ ನಿರ್ದೇಶಕ ಎಸ್.ಶಿವಪ್ರಸಾದ್

ತಜ್ಞರ ಸಲಹೆ ಪಡೆದು ಲಾಭ ಗಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಹಣ್ಣು, ತರಕಾರಿ ಬೆಳೆಗಳನ್ನು ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಬೆಳೆದಲ್ಲಿ ರೈತರು ಉತ್ತಮ ಲಾಭ ಪಡೆಯಬಹುದು ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ನಿರ್ದೇಶಕ ಎಸ್.ಶಿವಪ್ರಸಾದ್ ತಿಳಿಸಿದರು. 

ಪಟ್ಟಣದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿಯಲ್ಲಿ ಆಯೋಜಿಸಿದ್ದ ಬುಡಕಟ್ಟು ಜನಾಂಗದ ಉಪ ಯೋಜನೆಯಡಿ ಹಣ್ಣಿನ ಸಸಿ, ತರಕಾರಿ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿ, ಪಂಗಡದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಕೊಳವೆಬಾವಿ ಇರುವ ರೈತರಿಗೆ ಸುಧಾರಿತ ಹಣ್ಣಿನ ಸಸಿಗಳನ್ನು ವಿತರಿಸಲಾಗುತ್ತಿದೆ. ಸಸಿಗಳನ್ನು ವಿಜ್ಞಾನಿಗಳ ಮಾರ್ಗದರ್ಶನದಂತೆ ಪೋಷಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ನಿಡಗಲ್ ಹೋಬಳಿಯ ದೇವಲಕೆರೆಯಲ್ಲಿ ಸುಮಾರು 170 ಎಕರೆ ಪ್ರದೇಶಕ್ಕೆ ಸಾಕಾಗುವಷ್ಟು ಮಾವು, ನುಗ್ಗೆ, ನೇರಳೆ, ಸೀಬೆ ಸಸಿಗಳನ್ನು ವಿತರಿಸಲಾಗಿದೆ. ವೈ.ಎನ್.ಹೊಸಕೋಟೆಯಲ್ಲಿ 140 ಎಕರೆ ಪ್ರದೇಶಕ್ಕೆ ಅಗತ್ಯವಿರುವ ತರಕಾರಿ ಬೀಜ ವಿತರಿಸಲಾಗಿದೆ. ವಿಜ್ಞಾನಿಗಳು ಶ್ರಮಪಟ್ಟು ಅಭಿವೃದ್ಧಿಪಡಿಸಿದ ಉತ್ತಮ ತಳಿಗಳ ಹಣ್ಣು ತರಕಾರಿ ಬೆಳೆಗಳನ್ನು ಶ್ರದ್ಧೆಯಿಂದ ಬೆಳೆದು ರೈತರು ಅಭಿವೃದ್ಧಿಯತ್ತ ಸಾಗಬೇಕು ಎಂದರು.

ಕೃಷಿ ವಿಜ್ಞಾನ ಕೆಂದ್ರದ ಮುಖ್ಯಸ್ಥ ಲೋಗಾನಂದನ್, ರೈತರಿಗೆ ಮುಂದಿನ ದಿನಗಳಲ್ಲಿ ತರಕಾರಿ, ಹಣ್ಣಿನ ಬೆಳೆಗಳನ್ನು ಬೆಳೆಯುವ ಬಗ್ಗೆ ತರಬೇತಿ ಕೊಡಲಾಗುವುದು. ಏನೇ ಸಮಸ್ಯೆ ಇದ್ದರೂ ವಿಜ್ಞಾನಿಗಳಿಂದ ಸಲಹೆ ಪಡೆಯಬಹುದು ಎಂದರು.

ವಿಜ್ಞಾನಿ ಪ್ರಶಾಂತ್, ಹುಣಸೆ, ಸೀಬೆ, ಮಾವು, ಸೀತಾಫಲ ಸಸಿಗಳನ್ನು 25 ಅಡಿ ಅಂತರದಲ್ಲಿ ನೆಡಬೇಕು. ಸ್ಥಳೀಯವಾಗಿ ಸಿಗುವ ಸೊಪ್ಪುಗಳನ್ನು ಗುಂಡಿಗೆ ಹಾಕಿ ಗೊಬ್ಬರವನ್ನಾಗಿಸಿ ಸಸಿ ನೆಡಬೇಕು ಎಂದರು.

ವಿಜ್ಞಾನಿ ಪ್ರಸನ್ನಕುಮಾರ್, ರೋಟರಿ ಸಂಸ್ಥೆ ಪದಾಧಿಕಾರಿ ಡಾ.ಮಾಕಂ ಪ್ರಭಾಕರ್ ಮಾತನಾಡಿದರು.

ಬಿಜೆಪಿ ಪದಾಧಿಕಾರಿಗಳಾದ ಜಿ.ಟಿ.ಗಿರೀಶ್, ಶಿವಕುಮಾರ್ ಸಾಕೇಲ್, ದುಗ್ಗಿ ವೆಂಕಟೇಶ್, ನಾಗರಾಜ್, ಉಮೇಶ್, ಬ್ಯಾಡನೂರು ಶಿವು, ಪಾಂಡು, ಶೇಖರ್, ಮದೂಶ್, ತಿಪ್ಪೇಸ್ವಾಮಿ, ಚೈತನ್ಯ ಪ್ರಭು, ಬಾಲಮ್ಮನಹಳ್ಳಿ ಸೂರ್ಯನಾರಾಯಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.