ಶುಕ್ರವಾರ, ಮಾರ್ಚ್ 5, 2021
30 °C
ಸಾಲ ವಾಪಸ್‌ ಕೇಳಿದವನ ಮೇಲೆ ದೌರ್ಜನ್ಯ

ಗ್ರಾ.ಪಂ. ಸದಸ್ಯನಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಿಗೇನಹಳ್ಳಿ (ಮಧುಗಿರಿ ತಾ): ಸಾಲ ವಾಪಸ್‌ ಕೇಳಿದ ನರಸಪ್ಪ ಅವರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣ ಹಾಗೂ ಆತನ ಸ್ನೇಹಿತರು ಮಚ್ಚು ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿದ್ದಾರೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡುಗಲ್ಲು ಗ್ರಾಮದ ನರಸಪ್ಪ ಅವರು ಅದೇ ಗ್ರಾಮದ ಲಕ್ಷ್ಮೀನಾರಾಯಣ ಅವರಿಗೆ ಚುನಾವಣೆಗೂ ಮುನ್ನ ಸಾಲ ನೀಡಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನರಸಪ್ಪ ಕೂಡ ಸ್ಪರ್ಧಿಸಿದ್ದರು. ಲಕ್ಷ್ಮೀನಾರಾಯಣ ವಿರುದ್ಧ ಸೋತಿದ್ದರಿಂದ ಬೇಸರಗೊಂಡ ನರಸಪ್ಪ ಸಾಲ ವಾಪಸ್‌ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಲಕ್ಷ್ಮೀನಾರಾಯಣ ಹಾಗೂ ಅದೇ ಗ್ರಾಮದವರಾದ ಗಂಗಪ್ಪ, ನರೇಂದ್ರಬಾಬು, ಗಂಗಾಧರಪ್ಪ ಹಾಗೂ ನಾರಾಯಣಪ್ಪ ಅವರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು