ಶನಿವಾರ, ಜುಲೈ 24, 2021
28 °C

ಅಂಗವಿಕಲ ವಿದ್ಯಾರ್ಥಿಗಳಿಗೆ ದಿನಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ಕ್ಷೇತ್ರದಲ್ಲಿ ಈಗಾಗಲೇ ವೈದ್ಯರನ್ನು ನೇಮಿಸಿ, ಸೋಂಕಿತರ ಮನೆಗೆ ಭೇಟಿ ನೀಡಿ ಉಚಿತ ಔಷಧಿ ಕಿಟ್ ನೀಡುವುದರೊಂದಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದಲ್ಲಿ ಪಾವಗಡ ರಾಮಕೃಷ್ಣ ಸೇವಾಶ್ರಮ, ಇನ್ಫೊಸಿಸ್‌ ಫೌಂಡೇಷನ್, ಸತ್ಯನಾರಾಯಣ ಸೇವಾಶ್ರಮ ಟ್ರಸ್ಟ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 456 ಅಕ್ಷರ ದಾಸೋಹ ಸಿಬ್ಬಂದಿ, 42 ಅಂಗವಿಕಲ ವಿದ್ಯಾರ್ಥಿಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಲ್ಲ ವೈದ್ಯರನ್ನು ಕ್ಷೇತ್ರದ ಜನರ ಆರೋಗ್ಯ ತಪಾಸಣೆಗೆ ನೇಮಿಸಲಾಗಿದೆ. ‘ವೈದ್ಯರ ನಡೆ ಹಳ್ಳಿ ಕಡೆ’ ಅಭಿಯಾನದಡಿ ವೈದ್ಯರು ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿ, ಔಷಧಿ ಕಿಟ್ ನೀಡಲಾಗುತ್ತಿದೆ. ಕ್ಷೇತ್ರದ ಜನರಿಗಾಗಿ 20 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ ನೀಡಲಾಗುತ್ತಿದೆ ಎಂದರು.

ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯವರು ಡಾ.ಜಿ.ಪರಮೇಶ್ವರ ಅವರಂತೆ ವೈದ್ಯರ ನಡೆ ಹಳ್ಳಿಕಡೆ ಎಂಬಂತೆ ಮನೆಮನೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರೆ ಇಷ್ಟೊತ್ತಿಗಾಗಲೇ ಕೋವಿಡ್‌ ಇಲ್ಲವಾಗುತ್ತಿತ್ತು ಎಂದರು.

ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ತಾ.ಪಂ ಆಡಳಿತಾಧಿಕಾರಿ ಟಿ.ಎನ್.ಅಶೋಕ್, ಇಒ ಎಸ್.ಶಿವಪ್ರಕಾಶ್, ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ, ಬಿಇಒ ಸುಧಾಕರ್, ಬಿಆರ್‌ಸಿ ಸುರೇಂದ್ರನಾಥ್, ಅಕ್ಷರದಾಸೋಹ ಅಧಿಕಾರಿ ಟಿ.ಆರ್.ರಘು, ಕೃಷಿ ಅಧಿಕಾರಿ ಎಚ್.ನಾಗರಾಜು, ಉಪ ಪ್ರಾಂಶುಪಾಲೆ ಚೈತ್ರ, ದೈಹಿಕ ಶಿಕ್ಷಣಾಧಿಕಾರಿ ವಜೀಂ ಅಹಮ್ಮದ್‌, ಟ್ರಸ್ಟ್‌ನ ರಾಜೀವ್, ರಾಜೇಶ್, ಸುರೇಶ್‌ಬಾಬು, ಅನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಪ.ಪಂ ಸದಸ್ಯರಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು, ನಾಗರಾಜು, ನಂದೀಶ್, ಮುಖಂಡರಾದ ಈರಣ್ಣ, ಗಣೇಶ್, ತುಂಗಾ ಮಂಜು, ಅರವಿಂದ್, ಆನಂದ್, ಕೆ.ಎಲ್.ಮಂಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.