ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಬಿದರೆಗುಡಿ ಹೊನ್ನವಳ್ಳಿ ಗೇಟ್ನ ಮೇಲ್ಸೇತುವೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯ 23 ಮೇಲ್ಸೇತುವೆಗೆ ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ರಾಜ್ಯದ 250ರಿಂದ 350 ಮೇಲ್ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿಗಳ ಗುರಿ ಹೊಂದಲಾಗಿದೆ ಎಂದರು.

ಹೊನ್ನವಳ್ಳಿ ಮೇಲ್ಸೇತುವೆ ನಿರ್ಮಾಣದಿಂದ ಪ್ರಯಾಣಿಕರ ಸುರಕ್ಷತೆ, ಸಂಚಾರ ದಟ್ಟಣೆಗೆ ತಡೆಬೀಳಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಹಾಗೂ ವರ್ಷದೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಜಿಲ್ಲೆಗೆ ಅಗತ್ಯವಿರುವ ರೈಲ್ವೆ ಯೋಜನೆ ಹಾಗೂ ನೀರಾವರಿಗೆ ಸಂಬಂಧಿಸಿದ ಕೆಲಸಗಳನ್ನು ಸಾಧ್ಯವಾದಷ್ಟು ಮಾಡಲಾಗುತ್ತಿದೆ. ಆದರೆ ಸಾರ್ವಜನಿಕರು ಸಮುದಾಯ ಭವನಗಳಿಗೆ, ದೇವಾಲಯ ನಿರ್ಮಾಣಕ್ಕೆ ಅನುದಾನ ಕೋರಿ ಅರ್ಜಿ ನೀಡುತ್ತಿದ್ದು, ಅನುದಾನದ ಕೊರತೆಯಿಂದ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಮಾಜಿ ಸಚಿವ ಬಿ.ಸಿ.ನಾಗೇಶ್, ಮುಖ್ಯ ಎಂಜಿನಿಯರ್ ಶ್ರೀಹರಿ, ಪ್ರಸಾದ್, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೋಂಡ, ಇಒ ಸುದರ್ಶನ್, ತಹಶೀಲ್ದಾರ್ ಪವನ್ ಕುಮಾರ್, ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ಜ್ಯೋತಿಮಹೇಶ್, ಸದಸ್ಯರು, ಜೆಡಿಎಸ್ ಮುಖಂಡ ಶಾಂತ್ಕುಮಾರ್ ಕೆ.ಟಿ., ನಗರಸಭಾ ಸದಸ್ಯ ರಾಮ್ಮೋಹನ್, ಶಶಿಕಿರಣ್, ರಾಮಚಂದ್ರಪ್ಪ, ದೇವರಾಜು, ಗಂಗಾಧರ್, ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.