ಗುಬ್ಬಿ: ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತಾಲ್ಲೂಕಿನ ಕಡಬದಿಂದ ಕಾಡಶೆಟ್ಟಿಹಳ್ಳಿಯವರೆಗೆ ರೈತ ಸಂಘದವರು ನೂರಾರು ರೈತರೊಂದಿಗೆ ಗುರುವಾರ ಬೈಕ್ ರ್ಯಾಲಿ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಕಡಬ ಹೋಬಳಿ ಗಂಗಸಂದ್ರ, ಕಾಡಶೆಟ್ಟಿಹಳ್ಳಿ ಭಾಗದಲ್ಲಿ ಕಳೆದ ಮಂಗಳವಾರ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭಿಸಲು ಬಂದಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ, ಕಾಮಗಾರಿ ತಡೆದಿದ್ದರು. ನೀರಾವರಿ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸರ್ವೆಗೆ ಬರುವುದಾಗಿ ತಿಳಿಸಿ ಹೋಗಿದ್ದರು.

ಗುರುವಾರ ಅಧಿಕಾರಿಗಳು ಬರುವರು ಎಂದು ಸ್ಥಳೀಯರು ರೈತಸಂಘದೊಂದಿಗೆ ರ್ಯಾಲಿ ನಡೆಸಿದರು.

ರೈತ ಸಂಘದವರ ಜೊತೆ ಸುತ್ತಲಿನ ಗ್ರಾಮಗಳ ನೂರಾರು ರೈತರು ಹಾಗೂ ಮುಖಂಡರು ಸೇರಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಈಗಾಗಲೇ ನಿರ್ಮಿಸಿರುವ ಹೇಮಾವತಿ ಉಪ ನಾಲೆಯ ಕೆಳಭಾಗದಲ್ಲಿಯೇ ಪೈಪ್ ಅಳವಡಿಸಿ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಅಧಿಕಾರಿಗಳು ಹೇಳುವುದು ಕಾನೂನುಬಾಹಿರ. ಈ ಹಿಂದೆ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು ಉಪನಾಲೆ ನಿರ್ಮಾಣಕ್ಕಾಗಿ ಮಾತ್ರ. ಇದು ರಾಜ್ಯಪತ್ರದಲ್ಲಿಯೂ ಇದೆ. ನಾಲೆ ಮಾಡಿರುವ ಜಾಗದಲ್ಲಿ ಮತ್ತೊಮ್ಮೆ ಯಾವುದೇ ಕಾಮಗಾರಿ ಮಾಡಿದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ. ಅಧಿಕಾರಿಗಳು ಮೊದಲು ಕಾನೂನು ಅರಿತು ಕಾಮಗಾರಿಗೆ ಮುಂದಾಗಲಿ ಎಂದು ಪ್ರತಿಭಟನೆನಿರತರು ಹೇಳಿದರು.

ಯಾವುದೇ ಕಾಮಗಾರಿ ಪ್ರಾರಂಭಿಸುವುದಕ್ಕಿಂತ ಮೊದಲು ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತರಬೇಕಾಗುತ್ತದೆ. ಆದ್ದರಿಂದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಸುವ ಪ್ರದೇಶಗಳ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸಿ ರೈತರೊಡನೆ ಚರ್ಚಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಸಭೆಯಲ್ಲಿ ತೀರ್ಮಾನವಾಗುವವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ಪ್ರಾರಂಭಿಸಬಾರದು. ಒಂದು ವೇಳೆ ಅಧಿಕಾರಿಗಳು ಕಾಮಗಾರಿ ನಡೆಸಲು ಮುಂದಾದಲ್ಲಿ ರೈತರು ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ನಿರ್ಣಯವೇ ಅಂತಿಮವಾಗಿರುವುದರಿಂದ ಅಧಿಕಾರಿಗಳನ್ನು ಒಳಗೊಂಡಂತೆ ಎಲ್ಲರೂ ಗ್ರಾಮಸಭೆಯ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ ಎಂದು ತಿಳಿಸಿದರು.

ಅಧಿಕಾರಿಗಳು ಈ ಹಿಂದೆ ಹೇಮಾವತಿ ನಾಲೆಗೆ ಭೂಸ್ವಾಧೀನ ಪಡಿಸಿಕೊಂಡಾಗ ನೀಡಿರುವ ಪರಿಹಾರದ ಮೊತ್ತ ಕಡಿಮೆಯಾಗಿದ್ದು, ಈಗಲೂ ಹಳೆಯ ಪದ್ಧತಿ ಅನುಸರಿಸುವುದಾದರೆ ಅದಕ್ಕೆ ಒಪ್ಪುವುದಿಲ್ಲ. ಕಾನೂನು ಕ್ರಮ ಕೈಗೊಳ್ಳದೆ ರೈತರಿಗೂ ಪರಿಹಾರ ನೀಡದೆ ಅಕ್ರಮವಾಗಿ ಪೈಪ್ ಮೂಲಕ ನೀರು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಎಸ್.ಡಿ. ದಿಲೀಪ್ ಕುಮಾರ್, ಕಾಡಶೆಟ್ಟಿಹಳ್ಳಿ ಸತೀಶ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಗೌಡ, ಕಾರ್ಯದರ್ಶಿ ಲೋಕೇಶ್, ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು, ನೂರಾರು ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗ್ರಾಮಸಭೆ ನಿರ್ಧಾರ

ಗ್ರಾಮಸಭೆ ನಡೆಸುವ ವಿಚಾರಕ್ಕೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಒಪ್ಪಿಗೆ ಸೂಚಿಸಿದರು. ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಶೀಘ್ರ ಗ್ರಾಮಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.