ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಗೆ ಕಿರುಕುಳ: ಆರೋಪಿ ಬಂಧನ

Published 3 ಜನವರಿ 2024, 14:30 IST
Last Updated 3 ಜನವರಿ 2024, 14:30 IST
ಅಕ್ಷರ ಗಾತ್ರ

ತುಮಕೂರು: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಗರದ ನಿವಾಸಿ ಪೀರು ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶಾಲೆಗೆ ಹೋಗುವಾಗ ಆರೋಪಿ ಬಾಲಕಿಯ ಹಿಂದೆ ಹೋಗುತ್ತಿದ್ದ. ಕೆಟ್ಟ ಉದ್ದೇಶದಿಂದ ನೋಡುತ್ತಿದ್ದ, ಚುಡಾಯಿಸಿ, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಸೋಮವಾರ ರಾತ್ರಿ ಬಾಲಕಿಯು ತನ್ನ ಸ್ನೇಹಿತೆಯ ಮನೆಯಿಂದ ವಾಪಸ್‌ ಮನೆಗೆ ಹೋಗುವಾಗ ಆರೋಪಿ ಬಾಲಕಿಯನ್ನು ಎಳೆದಾಡಿ, ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಪೋಷಕರಿಗೆ ತಿಳಿಸಿದ್ದಳು.

ಬಾಲಕಿಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT