ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು: ಭಾರಿ ಮಳೆ, ಸಿಡಿಲು ಬಡಿದು 20 ಕುರಿ ಸಾವು

Published 12 ಮೇ 2024, 11:37 IST
Last Updated 12 ಮೇ 2024, 11:37 IST
ಅಕ್ಷರ ಗಾತ್ರ

ಹುಳಿಯಾರು (ಚಿಕ್ಕನಾಯಕನಹಳ್ಳಿ): ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು 20 ಕುರಿ ಸಾವನ್ನಪ್ಪಿವೆ.

ಜಯಣ್ಣ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಮೇಯಿಸಲು ಹೋಗಿದ್ದ ವೇಳೆ ಮಳೆ ಆರಂಭವಾಗಿದೆ. ಕುರಿಗಳು ಹುಣಸೆ ಮರದ ಕೆಳಗೆ ನಿಂತಿರುವಾಗ ಸಿಡಿಲು ಬಡಿದಿದೆ. ಜಯಣ್ಣ ಮತ್ತೊಂದು ಮರದಡಿ ಆಶ್ರಯ ಪಡೆದಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ತಿಮ್ಮನಹಳ್ಳಿ ಪಶು ಚಿಕಿತ್ಸಾಲಯದ ವೈದ್ಯ ಶಾಂತೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT