ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಹುಲ್ಲೇಕೆರೆ ರಸ್ತೆ ಕಳಪೆ ಕಾಮಗಾರಿಯ ಆರೋಪ

Last Updated 7 ಜೂನ್ 2020, 9:19 IST
ಅಕ್ಷರ ಗಾತ್ರ

ತುರುವೇಕೆರೆ: ‘ತಾಲ್ಲೂಕಿನ ದೊಡ್ಡೇನಹಳ್ಳಿ ಬಾರೆಯಿಂದ ಮಾಚೇನಹಳ್ಳಿವರೆಗಿನ ಡಾಂಬರ್ ರಸ್ತೆ ಕಾಮಗಾರಿಯಲ್ಲಿ ಲೋಕೋಪಯೋಗಿ ಇಲಾಖೆಯ ಮೂವರು ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಮುಖಂಡ ಜಿ. ಮಂಚೇನಹಳ್ಳಿ ಕೃಷ್ಣಮೂರ್ತಿ ಆರೋಪಿಸಿದರು.

ತುರುವೇಕೆರೆ- ಹುಲ್ಲೇಕೆರೆ ರಸ್ತೆ ಸರಪಳಿಯ 4.5 ಕಿ.ಮೀ ರಸ್ತೆಯನ್ನು ಎಸ್ಇಪಿ ಯೋಜನೆಯಡಿ ₹ 1.42 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಮಾಡಿದ್ದು, ಕಳಪೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು. ಈ ಡಾಂಬರ್ ಕಿತ್ತು ಹೊಸದಾಗಿ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು.

‘ಕಳಪೆ ಕಾಮಗಾರಿಯನ್ನು ಪ್ರಶ್ನಿಸಿದ್ದಕ್ಕಾಗಿ ನನಗೆ ಕೊಲೆ ಬೆದರಿಕೆ ಬಂದಿದೆ. ಈ ಬಗ್ಗೆ ದಂಡಿನಶಿವರ ಪೊಲೀಸ್‌ ಠಾಣೆಯಲ್ಲಿ ಎಂಜಿನಿಯರ್‌ಗಳಾದ ಸಂಜೀವರಾಜು, ಗುರುಸಿದ್ದಪ್ಪ, ಕಣ್ಮಣಿ, ಕಾಳಂಜಿಹಳ್ಳಿ ಸೋಮಶೇಖರ್‌, ಹಂಬಲದೇವನಹಳ್ಳಿ ತಿಮ್ಮೇಗೌಡ ವಿರುದ್ಧ ದೂರು ನೀಡಿದ್ದೇನೆ’ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಚೌದ್ರಿನಾಗೇಶ್, ಅರಳೀಕೆರೆ ರವಿ, ಬೋರೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT