ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ; ಕಾನೂನುಬದ್ಧವಾಗಿ ಸಕ್ರಮ: ಮುರುಗೇಶ ನಿರಾಣಿ

Last Updated 5 ಫೆಬ್ರುವರಿ 2021, 2:23 IST
ಅಕ್ಷರ ಗಾತ್ರ

ತುಮಕೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ದೂರುಗಳು ಬರುತ್ತಿವೆ. ಎಲ್ಲರಿಗೂ ಮರಳು, ಜಲ್ಲಿ ಬೇಕು. ಆದ್ದರಿಂದ ಕಾನೂನು ಸರಳಗೊಳಿಸಿ ಕಾನೂನು ಬದ್ಧವಾಗಿಯೇ ಸಕ್ರಮಕ್ಕೆ ಕ್ರಮಕೈಗೊಳ್ಳಲು ಚಿಂತಿಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಗುರುವಾರ ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಳ್ಳಿಗಳಲ್ಲಿನ ಹಳ್ಳ, ಕೊಳ್ಳಗಳಲ್ಲಿ ದೊರೆಯುವ ಮರಳನ್ನು ಆಶ್ರಯಮನೆಗಳ ನಿರ್ಮಾಣಕ್ಕೆ ಸ್ಥಳೀಯರು ಪಡೆಯಲು ಅನುಕೂಲ ಕಲ್ಪಿಸಲಾಗುವುದು. ಗ್ರಾಮ ಪಂಚಾಯಿತಿಗಳಿಗೆ ಇಂತಿಷ್ಟು ಎಂದು ನಿರ್ವಹಣೆಯ ಶುಲ್ಕ ಪಾವತಿಸಿ ಮರಳು ಪಡೆಯಲು ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ಸ್ಥಳೀಯರು ಟ್ರ್ಯಾಕ್ಟರ್‌ ಅಥವಾ ಎತ್ತಿನಗಾಡಿಗಳಲ್ಲಿ ಮಾತ್ರ ಮರಳು ಪಡೆದು ಸ್ವಂತಕ್ಕೆ ಉಪಯೋಗಿಸಬಹುದು. ಮರಳು ಸಂಗ್ರಹಿಸಿ ಟಿಪ್ಪರ್‌ಗಳಲ್ಲಿ ಬೇರೆ ಕಡೆಗಳಿಗೆ ಸಾಗಿಸಿದರೆ ಅವರಿಗೆ ದಂಡ ಮತ್ತು ರಾಯಧನ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಗಣಿಗಾರಿಕೆಯ ಅಕ್ರಮಗಳಿಗೆ ಐದು ಪಟ್ಟು ದಂಡ ವಿಧಿಸಲಾಗುವುದು. ಆದರೆ, ಬರಿ ದಂಡವೇ ಅಂತಿಮವಲ್ಲ. ಜನರಿಗೆ ಮರಳು ಮತ್ತು ಜಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಬೇಕಾಗಿದೆ. ಇದಕ್ಕಾಗಿ ಗಣಿಗಾರಿಕೆ ಕಾನೂನುಗಳನ್ನು ಸರಳಗೊಳಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT