ಶನಿವಾರ, ಡಿಸೆಂಬರ್ 3, 2022
21 °C
ಹಿರಿಯ ವಿಜ್ಞಾನಿ ಡಾ.ವಿಲಿಯಂ ಕ್ರ್ಯಾನ್ಟ್ಜ್‌ ಸಲಹೆ

‘ರಾಷ್ಟ್ರಕ್ಕಾಗಿ ಬದುಕುವ ಕಲೆ ಮೈಗೂಡಿಸಿಕೊಳ್ಳಿ’- ಹಿರಿಯ ವಿಜ್ಞಾನಿ ಡಾ.ವಿಲಿಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಭಾರತದ ಕೌಟುಂಬಿಕ ವ್ಯವಸ್ಥೆ ಅಪೂರ್ವವಾದದ್ದು. ರಾಷ್ಟ್ರದ ಸಂಸ್ಕೃತಿಯನ್ನು ನಿರ್ಲಕ್ಷಿಸದೆ ಅಧ್ಯಯನ ಮಾಡಿ, ಉತ್ತಮ ರೀತಿಯಲ್ಲಿ ಮುಂದುವರಿಸಬೇಕು’ ಎಂದು ಅಮೆರಿಕದ ಕೊಲರೆಡೊ ವಿಶ್ವವಿದ್ಯಾಲಯದ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ವಿಜ್ಞಾನಿ, ಸಂಶೋಧಕ ಡಾ.ವಿಲಿಯಂ ಕ್ರ್ಯಾನ್ಟ್ಜ್‌ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ‘ಜೀವನವು ನನಗೆ ಕಲಿಸಿದ ಪಾಠಗಳು’ ಕುರಿತ ವಿಶೇಷ ಪ್ರವಚನ ಮತ್ತು ಸಂವಾದದಲ್ಲಿ ಮಾತನಾಡಿದರು.

‘ಹತ್ತು ಸಾವಿರ ವರ್ಷಗಳ ಇತಿಹಾಸವುಳ್ಳ, ಅತ್ಯಂತ ಪ್ರಾಚೀನವೂ, ಅದ್ಭುತವೂ ಆದ ಭಾರತೀಯ ಸಂಸ್ಕೃತಿಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ. ದೇಶದ ವಿದ್ಯಾರ್ಥಿಗಳಲ್ಲಿ ಉತ್ತಮ ಬೌದ್ಧಿಕ ಸಾಮರ್ಥ್ಯವಿದೆ. ಭಾರತೀಯರು ಈ ರಾಷ್ಟ್ರಕ್ಕಾಗಿ ಬದುಕುವ ಕಲೆ ಮೈಗೂಡಿಸಿಕೊಳ್ಳಬೇಕು. ಉಪನಿಷತ್ತುಗಳನ್ನು ಗಮನಿಸಿರುವ ನನಗೆ ನಮ್ಮೆಲ್ಲ ಪ್ರಶ್ನೆಗಳಿಗೆ ನಮ್ಮ ಆಂತರ್ಯವೇ ಉತ್ತರಿಸುತ್ತದೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

ತಂದೆ, ತಾಯಿಯನ್ನು ಗೌರವಿಸಿ. ಅವರು ದೊಡ್ಡ ವಿದ್ಯಾವಂತರಲ್ಲದಿದ್ದರೂ ತಮ್ಮ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಶ್ರಮಿಸುತ್ತಾರೆ, ಬೆಂಬಲಿಸುತ್ತಾರೆ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಸ್ವಾಮಿ ಧೀರಾನಂದ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಅಕ್ಷಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸರಾವ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಟಿ.ಆರ್‌.ಲೀಲಾವತಿ, ಪ್ರಾಧ್ಯಾಪಕರಾದ ರಮ್ಯಾ ಕಲ್ಲೂರ್, ಸುಧೀರ್‌ ರಂಗನಾಥ್‌ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.