ಮಂಗಳವಾರ, ಜೂನ್ 15, 2021
21 °C
3,470 ಸೋಂಕಿತರಲ್ಲಿ 2,462 ಮಂದಿ ಗುಣಮುಖ

ಸಾವು ಏರಿಕೆ, ಸೋಂಕು ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 50 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 3,470ಕ್ಕೆ, ಮೃತಪಟ್ಟವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.

ಮೃತಪಟ್ಟವರಲ್ಲಿ ಇಬ್ಬರು ಪುರುಷರು, ಮೂವರು ಮಹಿಳೆಯರಿದ್ದಾರೆ. ತಿಪಟೂರು ತಾಲ್ಲೂಕು ಶಾರದಾನಗರ ಬಡಾವಣೆ 68 ವರ್ಷದ ಮಹಿಳೆ, ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ 40 ವರ್ಷದ ವ್ಯಕ್ತಿ, ಗುಬ್ಬಿ ತಾಲ್ಲೂಕಿನ 37 ವರ್ಷದ ವ್ಯಕ್ತಿ, ತುಮಕೂರು ತಾಲ್ಲೂಕು ಅಂತರಸನಹಳ್ಳಿ ಗ್ರಾಮದ 75 ವರ್ಷದ ವೃದ್ಧೆ, ತುಮಕೂರು ಹೆಗಡೆ ಕಾಲೊನಿ 44 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಗುಣಮುಖ ಪ್ರಮಾಣ ಏರಿಕೆ: ಸೋಮವಾರ 103 ಮಂದಿ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದರು. ಈವರೆಗೆ ದಾಖಲಾದ 3,470 ಮಂದಿ ಸೋಂಕಿತರಲ್ಲಿ ಈಗಾಗಲೇ 2,462 ಮಂದಿ ಗುಣಮುಖರಾಗಿದ್ದಾರೆ. 900 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದೆಡೆ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಗುಣಮುಖ ರಾಗುತ್ತಿದ್ದರೆ, ಇನ್ನೊಂದೆಡೆ ಮೃತ ಪಡುತ್ತಿರುವವರ ಸಂಖ್ಯೆಯೂ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.08

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.