ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ | ಮಣ್ಣು ಸಂರಕ್ಷಣೆ, ಡ್ರೋನ್ ಬಳಕೆ ಮಾಹಿತಿ

Published 6 ಡಿಸೆಂಬರ್ 2023, 14:41 IST
Last Updated 6 ಡಿಸೆಂಬರ್ 2023, 14:41 IST
ಅಕ್ಷರ ಗಾತ್ರ

ತೋವಿನಕೆರೆ: ಮೀತಿ ಮೀರಿದ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುವ ಭಯ ಕಾಡುತ್ತಿದೆ ಎಂದು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ನಿರ್ದೇಶಕ ಎಸ್.ಎನ್. ಸುಶೀಲ್ ಅಭಿಪ್ರಾಯಪಟ್ಟರು.

ರೈತ ಸಂಪರ್ಕ ಕೇಂದ್ರದ ಅವರಣದಲ್ಲಿ ನೇಗಿಲ ಸಿದ್ಧ ರೈತ ಉತ್ಪಾದಕರ ಕಂಪನಿ ಸಹಕಾರದಿಂದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ  ಏರ್ಪಡಿಸಿದ್ದ ವಿಶ್ವ ಮಣ್ಣು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆಯಿಂದ ಪಂಜಾಬ್‌ನಲ್ಲಿ ಉಂಟಾದ ಅನಾಹುತಗಳ ಮಾಹಿತಿ ನೀಡಿದರು.

ಹಿರಿಯ ವಿಜ್ಙಾನಿ ಡಾ.ಎ.ಎನ್. ಶೈಲೇಶ್ ಮಾತನಾಡಿ, ಪರತಂತ್ರ ಜೀವಿಗಳು, ಬೂಸ್ಟ್‌ ಪೌಡರ್‌ ಬಳಕೆ, ಸೈನ್ಯ ಹುಳ ಬಗ್ಗೆ, ಶೀಲಿಂದ್ರಗಳ ಮಾಹಿತಿ ಹಂಚಿಕೊಂಡರು.

ಬ್ಯೂರೊದಲ್ಲಿ ಸಂಶೋಧನೆ ಮಾಡಿರುವ ಹಲವು ಕೀಟಗಳು, ಜೀವಾಣುಗಳು, ಪೌಡರ್‌ಗಳ ಪ್ರದರ್ಶನ ಮಾಡಲಾಯಿತು.

ಡ್ರೋನ್ ಬಳಕೆಯಿಂದ ರೈತರಿಗೆ ಅಗುವ ಅನುಕೂಲದ ಬಗ್ಗೆ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ಮಾಡಲಾಯಿತು.

ಡಾ.ಕೊಲ್ಲಾ ಶ್ರೀದೇವಿ, ಹಿರಿಯಾ ವಿಜ್ಞಾನಿಗಳಾದ ಡಾ.ಆರ್‌ ವಸುಂಧರ್ ಆರ್, ಡಾ.ಬಿ.ಎಸ್.ಗೊಟಾಯಿಲ್, ಡಾ.ಸೆಲ್ವರಾಜ್, ವಿಜ್ಞಾನಿ ಡಾ. ರಿಚಾ, ಡಾ.ರಮ್ಯ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು‌.

ಮರೇನಾಯ್ಕನಹಳ್ಳಿ ರಮೇಶ್, ವಿಶ್ವ ರಾಕೇಶ್, ಹನುಮಂತರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT